ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಯಸ್ಸಾಂದತೆಲ್ಲಾ ಎನರ್ಜೀ ಜಾಸ್ತಿ ಆಗ್ತಿದೆಯಾ ? ಎಂಬ ಕುತೂಹಲ ಚಂದನವನದಲ್ಲಿ ಅಷ್ಟೇ ಅಲ್ಲಾ, ಈ ಸಿನಿ ಅಭಿಮಾನಿಗಳಲ್ಲೂ ಕಾಡುತ್ತಿದೆ. ಈ ವಿಷಯಕ್ಕೆ ಕಾರಣವೂ ಸಹ ಇದೆ.
ಈಗಾಗಲೇ ಸಿನಿಮಾದಲ್ಲಿ ಸೆಂಚುರಿ ಬಾರಿಸಿರುವ ಸೆಂಚುರಿ ಸ್ಟಾರ್ ಶಿವಣ್ಣ, ಈಗಾಗಲೇ ಶಿವಪ್ಪನಾಗಿ ನಟಿಸಲಿರುವ ಸಿನಿಮಾಕ್ಕೆ ಮೊನ್ನೆ ತಾನೇ ಚಾಲನೆ ಕೊಟ್ಟಿದ್ದು, ಭಜರಂಗಿ-2 ಸಿನಿಮಾ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಸಬೇಕಿದೆ.
ಈ ಅವಧಿ ಒಳಗೆ ಅಂದ್ರೇ ಈ ಕೊರೊನಾ ನಂತರ ಬರೋಬ್ಬರಿ 7 ಚಿತ್ರಗಳ ಅಭಿನಯಕ್ಕೆ ಶಿವಣ್ಣ ಮುಂದಾಗಿದ್ದಾರೆ. ಅವು ಯಾವ ಸಿನಿಮಾ ಎಂಬುದನ್ನು ಆರಂಭವಾದ್ಮೇಲೆ ಹೇಳ್ತೆನೆ ಎಂದಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಪೋನ್ ಸಂಭಾಷಣೆಯಲ್ಲೇ ಕಥೆ ಕೇಳಿದ ಶಿವಣ್ಣ. ಆ ಸಮಯದಲ್ಲಿ ತಾತನ ಊರು ಗಾಜನೂರಿನಲ್ಲಿ ಜಮೀನು ಕೆಲಸದಲ್ಲಿ ತೊಡಗಿ ಕೊಂಡಿದ್ದರು ಅಲ್ಲೇ ಸಿನಿಮಾ ಎಸ್ ಎಂದಿದ್ದಾರೆ.
ಇನ್ನು ಶಿವರಾಜ್ ಕುಮಾರ್ ಅಭಿನಯದ ಎರೆಡು ಬಹುನಿರೀಕ್ಷಿತ ಸಿನಿಮಾಗಳು, ಡ್ರಾಪ್ ಆಗಿದ್ದು 'ಎಸ್.ಆರ್.ಕೆ ಹಾಗೂ ಆರ್.ಡಿ.ಎಕ್ಸ್' ಟೈಟಲ್ ಎರೆಡು ಸಿನಿಮಾಗಳು ಸೆಟ್ಟೇರಿ ನಿಂತಿರುವುದನ್ನು ಸ್ವತಃ ಶಿವರಾಜ್ ಕುಮಾರ್ ಖಚಿತ ಪಡಿಸಿದ್ದಾರೆ.
ಹೊಸ ವರ್ಷದ ಆರಂಭದ ನೀರಿಕ್ಷೆಯಲ್ಲಿ ಶಿವಣ್ಣನ ಮುತ್ತು ನಮ್ಮಪ್ಪ, ಪುಣ್ಯವಂತ, ಭಾಧಷ, ದೇವನೆ ಬಿಡು ಗುರು, ಸಿಂಹಾ, ಆಪರೇಷನ್ ಗೋಲ್ಡನ್ ಗ್ಯಾಂಗ್, ಮನಮೋಹಕ, ಮದುವೆ ಸಿನಿಮಾಗಳು ಚಟುವಟಿಕೆಯಲ್ಲಿ ನಿರತವಾಗಿವೆ.
PublicNext
24/11/2020 06:42 pm