ಬಿಗ್‌ಬಾಸ್ ಖ್ಯಾತಿಯ ನಟಿ ಸನಾ ಖಾನ್ ಮದುವೆಯಾಗಿದ್ದಾರೆ. ಸಡನ್ ಶ್ರೀಮತಿಯಾಗಿ ಪ್ರತ್ಯಕ್ಷವಾಗಿದ್ದಾರೆ. ಈ ನಟಿ ವರಿಸಿದ್ದು ಗುಜರಾತಿನ ಮೌಲ್ವಿಯೊಬ್ಬರನ್ನು.
ಹೌದು.. ಬಿಗ್‌ಬಾಸ್ 6ರ ಖ್ಯಾತಿಯ ಸನಾ ಖಾನ್ ಈಗ ದಢೀರ್ ಮದುವೆ ಮೂಲಕ ಸುದ್ದಿಯಾಗಿದ್ದಾರೆ. ಪ್ರತಿ ಬಾರಿಯೂ ಈ ನಟಿ ವಿವಾದಕ್ಕೊಳಾಗಿದ್ದರು. ವಿವಾದಗಳಿಂದಲೇ ಹೆಸರಾಗಿದ್ದರು. ಮುಫ್ತಿ ಅನಾಸ್ ಎಂಬ ಇಸ್ಲಾಂ ಪುರೋಹಿತರನ್ನು ಮದುವೆಯಾದ ನಟಿ ತಮ್ಮ ಹೆಸರನ್ನು ಸೈಯದ್ ಸನಾ ಖಾನ್ ಎಂದು ಬದಲಾಯಿಸಿಕೊಂಡಿದ್ದಾರೆ. ಅಲ್ಲಾನಿಗಾಗಿ ಪ್ರೀತಿಸುತ್ತೇವೆ, ಅಲ್ಲಾನಿಗಾಗಿ ಮದುವೆಯಾಗಿದ್ದೇವೆ, ಅಲ್ಲಾನಿಗಾಗಿ ಜನ್ನತ್‌ನಲ್ಲಿಯೂ ಒಂದಾಗುತ್ತೇವೆ ಎಂದು ನಟಿ ಸನಾ ಖಾನ್ ಪೋಸ್ಟ್ ಹಾಕಿದ್ದಾರೆ.
ಇದಕ್ಕೂ ಮುಂಚೆ ಬ್ಯಾಕ್ ಲೆಸ್ ಧಿರಿಸು ಹಾಕಿದ್ದಾಗ ಸನಾ ಖಾನ್ ಅವರು ಬಾಲಿವಡ್ ನಟ ಸಲ್ಮಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ತಬ್ಬಿಕೊಂಡು ವಿವಾದ ಮಾಡಿಕೊಂಡಿದ್ದರು. ಆಗ ಸಲ್ಲು ಭಾಯ್ ಮುಜುಗುರಕ್ಕೆ ಒಳಗಾಗಿದ್ದರಂತೆ.
PublicNext
24/11/2020 02:07 pm