ತೆಲುಗು, ತಮಿಳಿನಲ್ಲಿ ಮಿಂಚಿ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಿದ್ದ ಚೆಲುವೆ ನಟಿ ಮಾಲಾಶ್ರೀ. ಅದ್ಭುತ ಅಭಿನಯದ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಮಾಲಾಶ್ರೀ ನಟನೆಯ ಸಿನಿಮಾ ಬಿಡುಗಡೆಯಾಗಿದೆ ಅಂದ್ರೆ ಚಿತ್ರಮಂದಿರದ ಮುಂದೆ ಟಿಕೆಟ್ ಪಡೆಯಲು ದೊಡ್ಡ ಕ್ಯೂ ಇರುತ್ತಿತ್ತು. ನಿಮಗೆ ಗೊತ್ತಾ ಮಾಲಾಶ್ರೀ ನಟನೆಯ 19 ಸಿನಿಮಾಗಳು ಒಂದೇ ವರ್ಷದಲ್ಲಿ ಬಿಡುಗಡೆಯಾಗಿದ್ದವು.
1989ರಲ್ಲಿ 'ನಂಜುಂಡಿ ಕಲ್ಯಾಣ' ಹಾಗೂ 'ಗಜಪತಿ ಗರ್ವಭಂಗ' ಚಿತ್ರದಲ್ಲಿ ನಟಿ ಸ್ಯಾಂಡಲ್‌ವುಡ್‌ನಲ್ಲಿ ಅಲೆ ಎಬ್ಬಿಸಿದ್ದ ಮಾಲಾಶ್ರೀ ಅವರಿಗೆ ಸಿಕ್ಕ ಅವಕಾಶಗಳು ಹೇಳತೀರದಷ್ಟು. 1991ರಲ್ಲಿ ಮಾಲಾಶ್ರೀ ಅಭಿನಯದ 12 ಸಿನಿಮಾಗಳು ರಿಲೀಸ್ ಆದರೆ, 1992ರಲ್ಲಿ 19 ಸಿನಿಮಾಗಳು ರಿಲೀಸ್ ಆಗಿದ್ದವು. ಈ ಪೈಕಿ ಅವರು ಯಶಸ್ಸು ಕಂಡಿದ್ದು ಕೇವಲ ಎರಡೇ ('ಬೆಳ್ಳಿ ಕಾಲುಂಗುರ' ಮತ್ತು 'ಮಾಲಾಶ್ರೀ ಮಾಮಾಶ್ರೀ') ಚಿತ್ರಗಳಲ್ಲಿ ಮಾತ್ರ.
1992ರಲ್ಲಿ ಭಾರೀ ಸೋಲು ಕಂಡರೂ ಮಾಲಾಶ್ರೀ ಅವರಿಗೆ ಇದ್ದ ಬೇಡಿಕೆ ಕಮ್ಮಿ ಆಗಿರಲಿಲ್ಲ. ಮುಂದಿನ ವರ್ಷ ಅಂದ್ರೆ 1993ರಲ್ಲಿ ಅವರ ಅಭಿನಯದ 9 ಸಿನಿಮಾಗಳು ತೆರೆಕಂಡವು. 1998ರ ಬಳಿಕ ಮಾಲಾಶ್ರೀ ನಟಿಸುವುದು ಕಡಿಮೆಯಾದರೂ ಈಗಲೂ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ.
PublicNext
22/11/2020 12:42 pm