90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಾಲನಟಿಯಾಗಿ ಬೇಬಿ ಶ್ಯಾಮಿಲಿ ಜನಪ್ರಿಯರಾಗಿದ್ದವರು. ತಮ್ಮ ಎರಡನೇ ವಯಸ್ಸಿಗೆ ಬಣ್ಣ ಹಚ್ಚಿ, ಮೂರನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ ನಟಿ ಶ್ಯಾಮಿಲಿ. ಈಗ ಅವರು ನಾಯಕಿಯಾಗಿ 4-5 ಸಿನಿಮಾ ಮಾಡಿದ್ದಾರೆ. ಅಷ್ಟಕ್ಕೂ ಶ್ಯಾಮಿಲಿಯನ್ನು ನೆನಪು ಮಾಡಿಕೊಳ್ಳಲು ಕಾರಣ, ನಟ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ! ಇಂದು (ನ.21) ಅರ್ಹಾ ಹುಟ್ಟುಹಬ್ಬ. ಆ ಸಲುವಾಗಿ ಒಂದು ಕವರ್ ಸಾಂಗ್ ರಿಲೀಸ್ ಮಾಡಲಾಗಿದೆ. ಆ ಮೂಲಕ ಎಲ್ಲರಿಗೂ ಬೇಬಿ ಶ್ಯಾಮಿಲಿ ನೆನಪಾಗುವಂತೆ ಮಾಡಿದ್ದಾಳೆ ಅರ್ಹಾ!
1990ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ 'ಅಂಜಲಿ'ಯಲ್ಲಿ ಬೇಬಿ ಶ್ಯಾಮಿಲಿ ನಟಿಸಿದ್ದರು. ಆಗಿನ್ನೂ ಅವರಿಗೆ ಬರೀ 3 ವರ್ಷ ವಯಸ್ಸು. ಆ ಚಿತ್ರದಲ್ಲಿ ಇದ್ದ 'ಅಂಜಲಿ ಅಂಜಲಿ..' ಹಾಡು ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ಆ ಹಾಡಿನ ಕವರ್ ವರ್ಷನ್‌ನಲ್ಲಿ ಸೇಮ್ ಶ್ಯಾಮಿಲಿಯಂತೆ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ ಅರ್ಹಾ. ಇದನ್ನು ಮಗಳ 4ನೇ ವರ್ಷದ ಜನ್ಮದಿನಕ್ಕಾಗಿ ವಿಶೇಷವಾಗಿ ಶೂಟ್ ಮಾಡಿಸಿದ್ದಾರೆ ಅಲ್ಲು ಅರ್ಜುನ್. ಸದ್ಯ ಯೂಟ್ಯೂಬ್‌ನಲ್ಲಿ ಈ ಹಾಡನ್ನು ಹಂಚಿಕೊಳ್ಳಲಾಗಿದ್ದು, ಬಹಳ ಮೆಚ್ಚುಗೆ ಪಡೆದುಕೊಂಡಿದೆ.
PublicNext
21/11/2020 04:39 pm