ನಟ ದರ್ಶನ್ ಸಿನಿಮಾಗಳು ಸಾಮಾನ್ಯವಾಗಿ ತೆಲುಗು, ತಮಿಳು, ಹಿಂದಿ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತವೆ. ಇದೇನು ಹೊಸ ಮ್ಯಾಟರ್ ಅಲ್ಲ. ಆದ್ರೆ ಈಗ ಹರಿದಾಡುತ್ತಿರೋ ಹೊಸ ಸುದ್ದಿಯೆಂದರೆ ಪಾಕಿಸ್ತಾನದಲ್ಲೂ ದರ್ಶನ್ ಸಿನಿಮಾ ಬಿಡುಗಡೆ ಆಗಿದೆಯಂತೆ!
ಪಾಕಿಸ್ತಾನದ ಕರಾಚಿಯ ಚಿತ್ರಮಂದಿರವೊಂದರಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಆಗಿದೆ ಎಂಬ ಸುದ್ದಿಯು ಚಿತ್ರವೊಂದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಚ್ಚು ಅಭಿಮಾನಿಗಳು ಈ ಸುದ್ದಿಯನ್ನು ವೈರಲ್ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಮಾಧ್ಯಮದೊಂದಿಗೆ ಮಾತನಾಡಿರುವ ಐರಾವತ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್, 'ನನಗೂ ಸಹ ಸಾಮಾಜಿಕ ಜಾಲತಾಣ ನೋಡಿ ವಿಷಯ ಗೊತ್ತಾಯಿತು'. ಎಂದಿದ್ದಾರೆ. ಚಿತ್ರದ ಸತ್ಯಾಸತ್ಯತೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದರೂ ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ ಹೊರತಾಗಿ ಇದುವರೆಗೆ ಬೇರೆ ಯಾವ ಕನ್ನಡ ನಟರ ಸಿನಿಮಾಗಳೂ ಸಹ ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿಲ್ಲ ಎನ್ನುತ್ತಿದ್ದಾರೆ.
PublicNext
18/11/2020 05:17 pm