'ಸಲಗ' ಸಿನಿಮಾದ ಮೂಲಕ ದುನಿಯಾ ವಿಜಯ್ ನಿರ್ದೇಶನಕ್ಕೆ ಸೈ ಎಂದಿರೋ ವಿಷಯ ಸದ್ಯ ಚಂದನವನದ ಸಿನಿ ಪ್ರೀಯರಿಗೆ ಗೊತ್ತಿರುವ ವಿಚಾರ.
ಈಗಾಗಲೇ ಸಲಗ ತನ್ನ ಚಿತ್ರಿಕರಣ ಮುಗಿಸಿದ್ದು ಮೊದಲಿನಂತೆ ಥಿಯೇಟರ್ ಬರೋ ಪ್ರೇಕ್ಷಕನ ದಾರಿ ಕಾಯುತ್ತಿರುವ ವಿಜಯ ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದಾರೆ.
ಈ ಸಲಗ ಸಿನಿಮಾ ಒಂದೇಡೆಯಾದ್ರೇ ಈಗಾಗಲೇ ತಮ್ಮ ನಿರ್ದೆಶನದ ಎರಡನೇ ಚಿತ್ರವನ್ನು ಅನೌನ್ಸ್ ಮಾಡಿರುವ ವಿಜಿ ಚಂದನವನಕ್ಕೆ ಮತ್ತೊಬ್ಬ ಹೊಸ ನಟನನ್ನು ಪರಿಚಯಿಸಲಿದ್ದಾರೆ, ಹೌದು ! ಈ ಚಿತ್ರದಲ್ಲಿ ಲಕ್ಕಿ ಎಂಬ ನವ ಪ್ರತಿಭೆ ನಾಯಕ ನಟನಾಗಿ ಬೆಳ್ಳಿಗೆ ತರಲು ಬರಲು ಸಜ್ಜಾಗಿದ್ದಾರೆ.
ಈ ಸಿನಿಮಾದಲ್ಲಿ ಕಿರು ತೆರೆಯ ಪ್ರತಿಭೆಗೆ ಬೆಳ್ಳಿ ತೆರೆಯ ಅವಕಾಶ ನೀಡಿರುವ ವಿಜಯ 'ಜೀ ಕನ್ನಡ ಪ್ರಸಾರವಾಗುವ ಪಾರು' ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆದ ನಟಿ ಮೋಕ್ಷಿತಾ ಪೈ ಹಿರೋಯಿನ್ ಪಾತ್ರ ನಿಭಾಯಿಸಲಿದ್ದಾರೆ.
ಇನ್ನು ಟೈಟಲ್ ಅಂತಿಮವಾಗದಿರುವ ಈ ಚಿತ್ರ ಈ ವರ್ಷದ ಅಂತ್ಯದಲ್ಲಿ ಅಂದರೇ ಡಿಸೆಂಬರ್ ತಿಂಗಳಲ್ಲಿ ಸೆಟ್ ಏರುವ ಸಾಧ್ಯತೆಗಳಿದ್ದು ಆ ಮೂಲಕ ನಾಯಕ ಹಾಗೂ ನಾಯಕಿ ಇಬ್ಬರ ಹೊಸ ಮುಖಗಳ ನಡುವೆ ದುನಿಯಾ ವಿಜಿ ಚಂದನವನದ ಎರಡನೇ ಸಿನಿಮಾ ನಿರ್ದೇಶನದ ಮುಂದಾಗಿದ್ದು ಈ ಅದೃಷ್ಟ ಹೊಸ ನಾಯಕಿ ಮೋಕ್ಷಿತಾ ಪೈ ಹಾಗೂ ನಾಯಕಿ ಲಕ್ಕಿ ಟರ್ನಿಂಗ್ ಪಾಯಿಂಟ್ ಆಗಲಿದೆಯಾ ? ಇದು ಪ್ರೇಕ್ಷಕನಿಗೆ ಬಿಟ್ಟ ವಿಚಾರ.
PublicNext
14/11/2020 01:36 pm