ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣನ ಮದುವೆಯಲ್ಲಿ ಮಿಂಚಿದ ಕಂಗನಾ ಕಲರ್ಫುಲ್ ಫೋಟೋ ವೈರಲ್

ಸದಾ ಕಿರಿಕ್ ಗಳಿಂದಲೇ ಸುದ್ದಿ ಆಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಮದುವೆ ಸಮಾರಂಭದಲ್ಲಿ ಬ್ಯುಸಿ ಆಗಿದ್ದಾರೆ.

ಕಳೆದೆರಡು ದಿನಗಳಿಂದ ಅವರ ಸೋಶಿಯಲ್ ಮೀಡಿಯಾದಲ್ಲಿ ಕಲರ್ ಫುಲ್ ಫೋಟೋಗಳು ಕಾಣಿಸುತ್ತಿವೆ.

ಕಂಗನಾ ರಣಾವತ್ ಸಹೋದರ ಅಕ್ಷತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಆ ಸಂಭ್ರಮವನ್ನು ಫೋಟೋ ಸಮೇತ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಉದಯಪುರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ (ನ.12) ಈ ಮದುವೆ ನಡೆದಿದೆ. ಕಂಗನಾ ಸಹೋದರ ಅಕ್ಷತ್ ಅವರ ವಿವಾಹವು ಹರಿಯಾಣ ಮೂಲದ ಯುವತಿ ರಿತು ಜೊತೆ ನೆರವೇರಿದೆ.

ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಕಂಗನಾ ಅತ್ತಿಗೆಗೆ ಸ್ವಾಗತ ಕೋರಿದ್ದಾರೆ.

ಲೆಹೆಂಗಾ ಮತ್ತು ಬಗೆಬಗೆಯ ಆಭರಣಗಳನ್ನು ಧರಿಸಿ ಕಂಗನಾ ಮಿಂಚುತ್ತಿದ್ದಾರೆ. ಅವರ ಸಹೋದರಿ ರಂಗೋಲಿ ಚಂಡೇಲ್ ಕೂಡ ಈ ಸಂಭ್ರಮದಲ್ಲಿ ಮುಳುಗೆದ್ದಿದ್ದಾರೆ.

ರಾಜಸ್ಥಾನಿ ಜಾನಪದ ಹಾಡುಗಳಿಗೆ ಕಂಗನಾ ಮತ್ತು ರಂಗೋಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ 'ತಲೈವಿ', 'ತೇಜಸ್' ಮುಂತಾದ ಸಿನಿಮಾಗಳು ಕಂಗನಾ ಕೈಯಲ್ಲಿವೆ.

Edited By : Nirmala Aralikatti
PublicNext

PublicNext

12/11/2020 03:32 pm

Cinque Terre

74.18 K

Cinque Terre

2