ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಂಚಿ ಮರೆಯಾದ ನಟ ಶಂಕರ್ ನಾಗ್ ಅವರಿಗೆ ಇಂದು ಹುಟ್ಟು ಹಬ್ಬ

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಶಂಕರ್ ನಾಗ್ ಮಿಂಚಿನಂತೆ ಬಂದು ಮರೆಯಾದ ಅಪರೂಪದ ಕಲಾವಿದ.

ಸ್ಯಾಂಡಲ್ ವುಡ್ನಿಂದ ಬಂದು ಆಗಲೇ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ನಟ ಬದುಕಿದ್ದು ಕೇವಲ 36 ವರ್ಷ.

ಇಷ್ಟು ಸಣ್ಣ ಅವಧಿಯಲ್ಲಿಯೇ ಶಂಕರ್ ಕೋಟ್ಯಾಂತರ ಮನಸ್ಸಿನಲ್ಲಿ ಅಚ್ಚಳಿಯದ ಹಾಗೆ ಉಳಿದ ನಟ ಶಂಕರ್ ನಾಗ್ ಅವರು 09 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು.

ತಂದೆ ಸದಾನಂದ ಶಂಕರ್ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದರು, ಅಲ್ಲಿನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾಗಿ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಂಡರು.

ಅಣ್ಣ ಅನಂತ್ ನಾಗ್ ರಂತೆ ಶಂಕರ್ ನಾಗ್ ಕೂಡ ಬ್ಯಾಂಕ್ ನೌಕರ ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು.

ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

‘ಒಂದಾನೊಂದು ಕಾಲ‘ದಲ್ಲಿ ಚಿತ್ರದ ಅಭಿನಯಕ್ಕೆ ಶಂಕರ್ ನಾಗ್ ಗೆ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು.

ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.

ಶಂಕರನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ‘ಗೆದ್ದ ಮಗ‘.

ಅಣ್ಣ ಅನಂತ ನಾಗ್ ಅವರೊಡನೆ ‘ಮಿಂಚಿನ ಓಟ‘, ‘ಜನ್ಮ ಜನ್ಮದ ಅನುಬಂಧ‘ ಮತ್ತು ‘ಗೀತಾ‘ ಚಿತ್ರಗಳನ್ನು ನಿರ್ಮಿಸಿದರು.

ಶಂಕರ್ ನಾಗ್ ಕಲಾವಿದೆ ಅರುಂಧತಿ ಅವರನ್ನು ಪ್ರೀತಿಸಿ ಮದುವೆಯಾದರು.

ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.

ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರ್ಕಾರದ ಮುಂದೆ ಇಟ್ಟಿದ್ದು ಇದೇ ಶಂಕರ್ ನಾಗ್.

ಸೆಪ್ಟೆಂಬರ್ 3೦, 1990 ರಂದು ದಾವಣಗೆರೆಯ ಅನಗೋಡು ಬಳಿ ಜೋಕುಮಾರ ಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತವಾಗಿ ಕೊನೆಯುಸಿರೆಳೆದರು .

Edited By : Nirmala Aralikatti
PublicNext

PublicNext

09/11/2020 04:24 pm

Cinque Terre

87.2 K

Cinque Terre

9

ಸಂಬಂಧಿತ ಸುದ್ದಿ