ಕನ್ನಡ ಚಿತ್ರರಂಗದಲ್ಲಿ ನಟಿಮಣಿಯರಿಗೆ ಏನೂ ಕೊರತೆಯಿಲ್ಲ. ಜೊತೆಗೆ ಅಷ್ಟೇ ಹೆಚ್ಚು ಹೆಚ್ಚು ಹೊಸ ಹೊಸ ಪ್ರತಿಭೆಗಳು ಬೆಳ್ಳಿ ತೆರೆ ಅಭಿನಯದಲ್ಲಿ ತೊಡಗಲು ಮುಂದಾಗಿದ್ದು ಸಿನಿಮಾಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆ ಪಾಲಿಗೆ ಸದ್ಯ ಮಂಗಳೂರಿನ ಮತ್ತೊಬ್ಬ ನಟಿ ಸೇರಿದ್ದಾರೆ.
ಹೌದು ! ಈಗಾಗಲೇ ತಮಿಳು ಹಾಗೂ ತೆಲುಗಿನಲ್ಲಿ ನಟಿಸಿರುವ ಈ ಕನ್ನಡತಿಯ ಹೆಸರು ರೆಬಾ ಮೋನಿಕಾ ಜಾನ್ ರೋಹಿತ್ ಪದಕಿ ನಿರ್ದೇಶನದ ಡಾಲಿ ಧನಂಜಯ್ ನಟನೆಯ "ರತ್ನನ್ ಪ್ರಪಂಚ" ಸಿನಿಮಾಗೆ ರೆಬಾ ನಾಯಕಿ ಪಾತ್ರಕ್ಕೆ ಎಸ್ ಎಂದಿದ್ದಾರೆ.
ತಾಯಿ ಹಾಗೂ ಮಗನ ಸೆಂಟಿಮೆಂಟ್ ಅಂಶವನ್ನೇ ಹೈಲೆಟ್ ಆಗಿರುವ "ರತ್ನನ್ ಪ್ರಪಂಚ" ಸಿನಿಮಾಗೆ ನಾಯಕಿಯಾಗಿರುವ ರೆಬಾ ಮೂಲತಃ ಕಡಲತೀರದ ಹುಡ್ಗಿ ಪಕ್ಕಾ ಮಂಗಳೂರಿನವರು. ಓದಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ 2016ರಲ್ಲಿ ತೆರೆಕಂಡ 'ಜಾಕೋಬಿಂಟೆ ಸ್ವರ್ಗರಾಜ್ಯಂ' ಇವರ ಮೊದಲ ಸಿನಿಮಾ ತಮಿಳಿನಲ್ಲಿ ಬಿಗಿಲ್ ಚಿತ್ರದಲ್ಲಿ ಅನಿತಾ ಎನ್ನುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದರು.
ಆ ಸಿನಿಮಾದಲ್ಲಿ ಹುಚ್ಚು ಪ್ರೇಮಿಯಿಂದ ಆಸಿಡ್ ದಾಳಿಗೆ ಒಳಗಾಗಿ ನಂತರ ಕ್ರೀಡಾ ಕ್ಷೇತ್ರದಲ್ಲಿ ಗೆಲುವು ಕಾಣುವ ಪಾತ್ರ ಅದಾಗಿತ್ತು. ಸದ್ಯ ರೆಬಾ ಅವರಿಗೆ 'ರತ್ನನ್ ಪ್ರಪಂಚ' ಕನ್ನಡದ ಎರಡನೇ ಸಿನಿಮಾ ಆಗಿದ್ದು ಈ ಮೊದಲು ಅವರು ರಿಷಿ ಜೊತೆ ಸಕಲಕಲಾ ವಲ್ಲಭ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ಟಗರು ಸಿನಿಮಾ ನಂತರ ಸಖತ್ ಬ್ಯುಸಿ ಆಗಿರುವ ಧನಂಜಯ್ ತಾಯಿ ಪ್ರೀತಿಯ ಸೆಂಟಿಮೆಂಟಲ್ ಸಿನಿಮಾ ರತ್ನನ್ ಪ್ರಪಂಚ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿದೆ.
PublicNext
07/11/2020 04:11 pm