ನಿನ್ನೆ ತಾನೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ನೋಡಿದವರು ಏನಂತಾರೇ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಈ ಮೂಲಕ ಗುಳ್ಟು ನವೀನ್ ಮತ್ತೆ ಬೆಳ್ಳಿ ತೆರೆಯ ಅದೃಷ್ಟಕ್ಕೆ ಮುಂದಾಗಿದ್ದಾರೆ.
ಈ ಸಿನಿಮಾ ಪೋಸ್ಟರ್ ಟೈಟಲ್ ಎರೆಡು ಡಿಫರೆಂಟ್ ಆಗಿದ್ದು ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ ಇಷ್ಟೇನಾ ಜೀವನ ಅಂತ ಎಷ್ಟೋ ಸಲ ಅನ್ನಿಸುವುದುಂಟು. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುಲೆಂದೆ ಸಿನಿಮಾವೊಂದು ಕನ್ನಡದಲ್ಲಿ ರೂಪುಗೊಳ್ಳುತ್ತಿದೆ ಎನ್ನುತ್ತಾರೆ.
ಹಿಪ್ಪೋ ಕಿಡ್ಡೋ ಸಂಸ್ಥೆಯ ಅಡಿಯಲ್ಲಿ ಶೋಭಾ ಗೋಪಾಲ್ ಅರ್ಪಿಸಿ, ನಾಗೇಶ್ ಗೋಪಾಲ್ ಮತ್ತು ಮೋನಿಷಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ.
ಇಂಜಿನಿಯರಿಂಗೇ ಸೇರ್ಕೋ, ಎಂಬಿಬಿಎಸ್ಸೇ ಮಾಡು.. ಇಲ್ದಿದ್ರೆ ನೋಡಿದವರು ಏನಂತಾರೆ ? ಹೆಣ್ಣುಮಕ್ಕಳಿಗೆ ಕಾಲು ಸೇರಿಸಿ ಕೂತ್ಕೋ, ನೋಡಿದವರು ಏನಂತಾರೆ ? ಸಾಲ ಮಾಡಿಯಾದರೂ ಕಾರು ತಗೊಳ್ಬೇಕು, ಇಲ್ಲಾಂದ್ರೆ ನೋಡಿದವರು ಏನಂತಾರೆ ? ಹೀಗೆ ಹುಟ್ಟಿನಿಂದ ಸಾಯೋತನಕ ಪ್ರತಿಯೊಂದಕ್ಕೂ ನೋಡಿದವರು ಏನಂತಾರೆ ಅಂದುಕೊಳ್ಳುತ್ತಾ ಸಮಾಜಕ್ಕಾಗಿ ಬದುಕುತ್ತಿರುತ್ತೇವೆ ಕಡೆಗೊಂದು ದಿನ ನಿಜಕ್ಕೂ ಯಾರಾದರೂ ನಮ್ಮನ್ನು ನೋಡ್ತಿದ್ದಾರಾ ಅನ್ನೋ ಡೌಟು ಬರುತ್ತದೆ.
ನಮಗಾಗಿ ನಾವು ಬದುಕುವುದಕ್ಕೆ ಸಾಧ್ಯಾನಾ? ಅಥವಾ ನೋಡಿದವರು ಏನಂತಾರೆ ಅನ್ನೋ ಕಾರಣಕ್ಕೆ ಕೃತಕವಾಗಿ ಬದುಕುತ್ತಿರಬೇಕಾ? ಈ ಎಲ್ಲ ಅಂಶಗಳನ್ನೇ ಸಿನಿಮಾ ಹೇಳುತ್ತಿದ್ದೇವೆ. ʻನೋಡಿದವರು ಏನಂತಾರೆ?ʼ ಎನ್ನುವ ಟೈಟಲ್ ಇಟ್ಟಿದ್ದೀವಿ ಅಂತಾರೇ ನಿರ್ದೇಶಕ ಕುಲ್ ದೀಪ್ ಕಾರಿಯಪ್ಪ.
ಗುಳ್ಟು ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತನಾದ ನವೀನ್ ಶಂಕರ್ ಈ ಚಿತ್ರಕ್ಕೆ ನಾಯಕನಾದರೆ, ಈವರೆಗೂ ಕಿರುತೆರೆಯಲ್ಲಿ ನಟಿಸಿದ್ದ ಅಪೂರ್ವ ಭಾರಧ್ವಾಜ್ ಈ ಕಮರ್ಷಿಯಲ್ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ತೆರೆಗೆ ಬರಲಿದ್ದಾರೆ.
PublicNext
06/11/2020 06:22 pm