ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಮ್ಮಪ್ಪ ನನಗಾಗಿ ಒಂದೇ ಒಂದು ಸಿನಿಮಾ ಮಾಡಲಿಲ್ಲ'

ಮುಂಬೈ: ಸ್ವಜನಪಕ್ಷಪಾತ (ನೆಪೋಟಿಸಂ) ಕುರಿತು ಚರ್ಚೆಯಾಗಲೆಲ್ಲಾ ಬಾಲಿವುಡ್‌ ನಟ ಅಭಿಷೇಕ್​ ಬಚ್ಚನ್​ ಅವರ ಹೆಸರು ಕೇಳಿಬರುತ್ತದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಭಿಷೇಕ್ ಬಚ್ಚನ್. ‘ನಮ್ಮಪ್ಪ ಅಮಿತಾಭ್​ ಬಚ್ಚನ್ ಇದುವರೆಗೂ ಫೋನ್​ ಮಾಡಿ ನನ್ನ ಮಗನಿಗೆ ಅವಕಾಶ ಕೊಡಿ ಎಂದು ಯಾರಿಗೂ ಹೇಳಿಲ್ಲ. ಅಷ್ಟೇ ಅಲ್ಲದೆ ಅವರ ನಿರ್ಮಾಣದ ಸಂಸ್ಥೆಯಲ್ಲಿ ನನಗಾಗಿ ಒಂದೇ ಒಂದು ಸಿನಿಮಾ ಮಾಡಲಿಲ್ಲ. ಆದರೆ ನಾನೇ ಅವರಿಗೆ ‘ಪಾ’ ಸಿನಿಮಾದಲ್ಲಿ ಅವರಿಗೆ ಅವಕಾಶ ನೀಡಿದೆ. ಹೀಗಿರುವಾಗ ಇಲ್ಲಿ ನೆಪೋಟಿಸಂ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಸುಲಭ. ಆದರೆ ಅಲ್ಲಿಯೇ ಉಳಿಯಬೇಕು ಎಂದರೆ ಸಾಕಷ್ಟು ಕಷ್ಟಪಡಬೇಕು ಮತ್ತು ಹೋರಾಟ ನಡೆಸಬೇಕು. ಅದನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

Edited By : Vijay Kumar
PublicNext

PublicNext

06/11/2020 04:28 pm

Cinque Terre

108.33 K

Cinque Terre

7