ಬೆಂಗಳೂರು: ಡ್ರಗ್ಸ್ ಜಾಲದ ನಂಟು ಪ್ರಕರಣ ರಾಜ್ಯದಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ಜಾಲದಲ್ಲಿ ಸದ್ಯ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಅನುಶ್ರೀ ಅವರಿಗೆ ವಾಟ್ಸಪ್ ಮೂಲಕ ನೋಟಿಸ್ ನೀಡಿದ್ದಾರೆ.
ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧಿಸಿರುವ ಮಂಗಳೂರಿನ ಸಿಸಿಬಿ ಪೊಲೀಸರು ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅನುಶ್ರೀ ಅವರಿಗೆ ವಾಟ್ಸಪ್‌ನಲ್ಲಿ ನೋಟಿಸ್ ಕಳುಹಿಸಿದ್ದಾರೆ. ಕಿಶೋರ್ ಅಮನ್ ಶೆಟ್ಟಿ ಆಪ್ತ ಸ್ನೇಹಿತ ತರುಣ್ ಅನುಶ್ರೀಯ ಜೊತೆ ಪಾರ್ಟಿ ಮಾಡಿದ್ದ. ವಿಚಾರಣೆಯ ಸಂದರ್ಭದಲ್ಲಿ ಈ ವಿಚಾರ ತಿಳಿಸಿದ್ದಕ್ಕೆ ಸಿಸಿಬಿಯಿಂದ ಅನುಶ್ರೀಗೆ ನೋಟಿಸ್ ಜಾರಿ ಮಾಡಲಾಗಿದೆ. ಅನುಶ್ರೀಗೆ ಖುದ್ದು ನೋಟಿಸ್ ನೀಡಲು ಬೆಂಗಳೂರಿಗೆ ಸಿಸಿಬಿ ತಂಡ ಈಗ ಹೊರಟಿದೆ ಎನ್ನಲಾಗಿದೆ.
PublicNext
24/09/2020 03:35 pm