ಬೆಂಗಳೂರು: ದೆಹಲಿಯಲ್ಲಿ ಅನ್ನದಾತರ ಹೋರಾಟ ನೋಡಿದರೆ ಹೊಟ್ಟೆ ಉರಿಯುತ್ತೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದು ಕೊಡ್ತಿದ್ದೆ ಎನ್ನುವ ಮೂಲಕ ಸ್ಯಾಂಡಲ್ ವುಡ್ ಹಿರಿಯ ನಟ ಡಾ. ಶಿವರಾಜ್ ಕುಮಾರ್ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಕೃಷಿ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ದೇಶವ್ಯಾಪಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ, ಹೆದ್ದಾರಿ ತಡೆ ಹೋರಾಟ ಸೇರಿದಂತೆ ರೈತರ ಹೋರಾಟ ಹಲವು ಸ್ವರೂಪ ಪಡೆದಿದೆ. ಅನ್ನದಾತರ ಕಿಚ್ಚು ಹೊತ್ತಿ ಉರಿಯುತ್ತಲೇ ಇದೆ. ರೈತರ ಹೋರಾಟದ ಬಗ್ಗೆ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್, ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಪಾಪ ಅನ್ಸುತ್ತೆ ಎಂದರು.
ರೈತರ ಈ ಹೋರಾಟದ ಬಗ್ಗೆ ಸಿನಿಮಾ ರಂಗದವರು ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೆ ಒಬ್ಬಿಬ್ಬರು ಹೋರಾಟಕ್ಕೆ ಇಳಿಯೋದ್ರಿಂದ ಪ್ರಯೋಜನ ಇಲ್ಲ. ಚಿತ್ರರಂಗ ಒಮ್ಮತದ ನಿರ್ಣಯ ಕೈಗೊಂಡು ರೈತರ ಬೆಂಬಲಕ್ಕೆ ನಿಂತರೆ ಬೀದಿಗಿಳಿಯಲು ಸಿದ್ಧ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
PublicNext
11/02/2021 01:11 pm