ನಿನಗಾಗಿ ಹೇಳುವೆ ಕಥೆ ನೂರನು... ನಾನಿಂದು ನಗಿಸುವೆ ಈ ನಿನ್ನನು... ಇರಳಲ್ಲು ಕಾಣುವೆ ಕಿರು ನಗೆಯನು'.... ಈ ಹಾಡು ಎಂತವರನ್ನೂ ತಲೆದೂಗುವಂತೆ ಮಾಡುತ್ತೆ. ಅಷ್ಟೊಂದು ತೂಕ ಉಳ್ಳ ಪದಗಳಿಗೆ ಅಂಧ ಗಾಯಕ ಧ್ವನಿಯಾಗಿ ನಟಿ ಅದಿತಿ ಪ್ರಭುದೇವ ಮನ ಗೆದ್ದಿದ್ದಾರೆ.
ನಟಿ ಅದಿತಿ ಪ್ರಭುದೇವ ಚಿತ್ರೀಕರಣದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಶ್ರೀನಿ ನಾಯಕತ್ವ ಹಾಗೂ ನಿರ್ದೇಶನದ ಓಲ್ಡ್ ಮಾಂಕ್ ಚಿತ್ರದ ಚಿತ್ರೀಕರಣದಲ್ಲಿ ಅದಿತಿ ಭಾಗವಹಿಸಿದ್ದಾರೆ. ಈ ವೇಳೆ ಸಿಕ್ಕ ವಿಶೇಷ ಅತಿಥಿಯೊಬ್ಬರ ಹಾಡಿಗೆ ಅದಿತಿ ಫಿದಾ ಆಗಿದ್ದಾರೆ.
ಈ ಕುರಿತು ಅದಿತಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ‘ಪ್ರತಿಭೆ ಯಾರ ಆಸ್ತಿಯೂ ಅಲ್ಲ. ಚಿಕ್ಕಪುಟ್ಟ ಸಮಸ್ಯೆಗಳಿಗೆ ಧೃತಿಗೆಡುವ ಅದೆಷ್ಟೊ ಮನಸುಗಳ ಮಧ್ಯೆ ದೇವರು ಕೊಟ್ಟ ಈ ಜನ್ಮವನ್ನು ಸಂತೋಷದಿಂದ ಕಳೆಯುತ್ತಿರುವ ಇಂತಹವರು ಸ್ಪೂರ್ತಿ ಎನಿಸುತ್ತಾರೆ. Infact, he made my day . ಓಲ್ಡ್ ಮಾಂಕ್ ಚಿತ್ರೀಕರಣದ ವೇಳೆ ಸಿಕ್ಕ ಗೆಳೆಯನಿಗೆ ಮನದುಂಬಿದ ಹಾರೈಕೆಗಳು ನಿನ್ನ ನಗು ಎಂದೂ ಮಾಸದಿರಲಿ’ ಎಂದು ಬರೆದುಕೊಂಡಿದ್ದಾರೆ.
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಅದಿತಿ ಅವರ ಬಗ್ಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
22/09/2020 12:10 pm