ಬೆಂಗಳೂರು: ಅವತಾರಪುರುಷ ಚಿತ್ರೀಕರಣದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಶರಣ್ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ನಟಿ ಶೃತಿ ಭೇಟಿ ನೀಡಿ ಶರಣ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಅಣ್ಣನಿಗೆ ಎರಡು ದಿನಗಳ ಹಿಂದೆಯೇ ಹೊಟ್ಟೆ ನೋವಿತ್ತು. ತಮ್ಮ ನೋವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ, ಸದ್ಯ ಈಗ ಎಕ್ಸ್ರೇ ಮಾಡಲಾಗಿದೆ, ಅಣ್ಣನಿಗೆ ಅಂತಹ ದೊಡ್ಡ ಸಮಸ್ಯೆ ಏನೂ ಆಗಿಲ್ಲ. ಡಾಕ್ಟರ್ ಕಿಡ್ನಿ ಸ್ಟೋನ್ ಆಗಿದೆ ಅಂತ ತಿಳಿಸಿದ್ದಾರೆ. ಡಾಕ್ಟರ್ ನಾಳೆ ಪರಿಸ್ಥಿತಿ ನೋಡಿಕೊಂಡು ಚಿಕಿತ್ಸೆ ಬಗ್ಗೆ ಹೇಳಲಿದ್ದಾರೆ ಎಂದು ನಟಿ ಶೃತಿ ತಿಳಿಸಿದ್ದಾರೆ.
'ಅವತಾರ ಪುರುಷ' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ತನ್ನಿಂದ ಸಿನಿಮಾ ಚಿತ್ರೀಕರಣ ನಿಂತು ಹೋಯ್ತಲ್ಲ ಅಂತ ಶರಣ್ ಬೇಸರವಾಗಿದ್ದರೆ ಎನ್ನಲಾಗಿದೆ.
PublicNext
26/09/2020 04:51 pm