ವಾಷಿಂಗ್ಟನ್: ಗ್ರ್ಯಾಮಿ ವಿಜೇತ ಅಮೆರಿಕದ ಗಾಯಕಿ ಲಿಜ್ಜೋ ಮತದಾನ ಜಾಗೃತಿ ಹಿನ್ನೆಲೆಯಲ್ಲಿ ಬೆತ್ತಲೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಲಿಜ್ಜೋ ಅಮೆರಿಕ ಧ್ವಜದ ಜಂಪ್‌ಸೂಟ್ ಅನ್ನು ದೇಹದ ಅರ್ಧ ಭಾಗಕ್ಕೆ ಧರಿಸಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ನಾನು ಈ ದೇಶದ ಬಗ್ಗೆ ಯೋಚಿಸುವಾಗ ಅದರ ಕಾನೂನುಗಳ ಕುರಿತು ಯೋಚಿಸುವುದಿಲ್ಲ. ದೇಶದ ಜನರ ಬಗ್ಗೆ ಯೋಚಿಸುತ್ತೇನೆ. ಹಿಂಸೆ, ಪ್ರಚಾರ ಮತ್ತು ಯುದ್ಧದ ದೇಶಭಕ್ತಿಯಿಂದ ನಾವು ಹೇಗೆ ಬೆಳೆದಿದ್ದೇವೆ ಎಂಬುದರ ಬಗ್ಗೆ ಯೋಚಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಲಿಜ್ಜೋ ಪೋಸ್ಟ್‌ಗೆ ನೆಟ್ಟಿಗರು 'ನಿಮ್ಮ ಜಾಗೃತಿ ಮೆಚ್ಚುಗೆ ಆಯಿತು' ಎಂದು ಹೇಳಿದರೆ, ಕೆಲವರು 'ಈ ರೀತಿಯ ಜಾಗೃತಿ ಅಗತ್ಯವಿತ್ತೆ' ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ.
PublicNext
04/11/2020 06:04 pm