ಮುಂಬೈ: ಭಾರೀ ಟೀಕೆ ಹಾಗೂ ಒತ್ತಡದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ನಟಿ ಕಿಯಾರಾ ಅಡ್ವಾಣಿ ಅಭಿನಯದ 'ಲಕ್ಷ್ಮಿ ಬಾಂಬ್' ಚಿತ್ರಕ್ಕೆ ಮರುಣಾಮಕರಣ ಮಾಡಲಾಗಿದೆ.
ಈ ಸಂಬಂಧ ಚಿತ್ರತಂಡವು ಗುರುವಾರ ಸೆನ್ಸಾರ್ ಮಂಡಳಿಯೊಂದಿಗೆ ಚರ್ಚಿಸಿ ನಂತರ ಶೀರ್ಷಿಕೆಯನ್ನು 'ಲಕ್ಷ್ಮಿ' ಎಂದು ಬದಲಾಯಿಸಲು ನಿರ್ಧರಿಸಿದೆ. ಹಿಂದಿನ ಶೀರ್ಷಿಕೆ ಲಕ್ಷ್ಮಿ ದೇವಿಯ ಬಗ್ಗೆ "ಅಗೌರವ" ತೋರಿಸಿದೆ ಎಂದು ಶ್ರೀ ರಜಪೂತ್ ಕರ್ಣಿ ಸೇನೆ ಲಕ್ಷ್ಮೀ ಬಾಂಬ್ ಚಿತ್ರ ತಂಡಕ್ಕೆ ನೋಟಿಸ್ ಕಳುಹಿಸಿದ್ದು, ಸಿನಿಮಾದ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸಿನಿಮಾದ ಶೀರ್ಷಿಕೆ ಬದಲಾಯಿಸಲು ನಿರ್ಧರಿಸಲಾಗಿದೆ.
ಲಕ್ಷ್ಮೀ ಬಾಂಬ್ ಸಿನಿಮಾ ನವೆಂಬರ್ 9ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ಗೆ ನಿಗದಿಯಾಗಿದೆ. ತೃತೀಯ ಲಿಂಗಿಯ ಆತ್ಮ ಅಕ್ಷಯ್ ಕುಮಾರ್ ಪಾತ್ರದೊಳಗೆ ಸೇರುವ ಕಥೆ ಇದಾಗಿದೆ. ಶ್ರೀ ರಜಪೂತ್ ಕರ್ಣಿ ಸೇನೆಯ ಪರವಾಗಿ ವಕೀಲ ರಾಘವೇಂದ್ರ ಮೆಹ್ರೋತ್ರಾ ನೋಟಿಸ್ ಕಳುಹಿಸಿದ್ದರು.
PublicNext
29/10/2020 05:43 pm