ಚಂದನವನದಲ್ಲಿ ಧೂಳೆಬ್ಬಿಸಿ ಬಾಕ್ಸಾಫೀಸ್ ನಲ್ಲಿ ಭಾರೀ ಸೌಂಡ್ ಮಾಡಿದ್ದ ಕೆಜಿಎಫ್ -1 ಮತ್ತೆ ಬಿಡುಗಡೆಯಾಗಿದೆ.
ಹಲವೆಡೆ ಈಗಾಗಲೇ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಮತ್ತು ಅಕ್ಟೋಬರ್ 29ರವರೆಗೆ ಪ್ರದರ್ಶಿತವಾಗಲಿದೆ. ಹೀಗಂತ ಚಿತ್ರತಂಡದ ಹಲವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಿನಿಮಾ ವೀಕ್ಷಿಸಿ ಎಂದು ಅವರು ಹೇಳಿದ್ದಾರೆ.
ಇನ್ನು ಕೆಜಿಎಫ್ ಬಗ್ಗೆ ಟ್ವೀಟ್ ಮಾಡಿರುವ ನಟ ಫರಾನ್ ಅಖ್ತರ್ ಚಿತ್ರ ಮರುಬಿಡುಗಡೆ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
PublicNext
26/10/2020 01:12 pm