ಬೆಂಗಳೂರು: ಸ್ಯಾಂಡಲ್ ವುಡ್ ನಾಯಕ ನಟ ದಿವಗಂತ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.
ನಗರದ KR ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿಂದು ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇನ್ನು ಸರ್ಜಾ ಕುಟುಂಬದಲ್ಲಿಯ ಸಂತೋಷ ಸಂಭ್ರಮಕ್ಕೆ ಪಾರವೇ ಇಲ್ಲವಾಗಿದೆ.
ಅಣ್ಣ ಚಿರಂಜೀವಿ ಸರ್ಜಾ.. ಜೂನಿಯರ್ ಚಿರು ರೂಪದಲ್ಲಿ ಬಂದೇಬರುತ್ತಾನೆ ಎಂದು ಇಡೀ ಸರ್ಜಾ ಕುಟುಂಬ ಅಪಾರ ನಿರೀಕ್ಷೆಯಲ್ಲಿತ್ತು ಅದು ಹುಸಿಯಾಗದೇ ನಿಜವಾಗಿದೆ.
ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ ಹಾಗೂ ಚಿರು ತಾಯಿ ಅಮ್ಮಾಜಿ ಮೂರು ದಿನದಿಂದ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯಲ್ಲೇ ಇದ್ದಾರೆ.
ಆಸ್ಪತ್ರೆ ಮುಂದೆ ಜಮಾಯಿಸಿರುವ ಚಿರು ಫ್ಯಾನ್ಸ್ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಇಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ಜೋಡಿಯ ಎಂಗೇಜ್ಮೆಂಟ್ ಆದ ದಿನ ಕೂಡಾ ಹೌದು.
PublicNext
22/10/2020 11:22 am