ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಾದದಲ್ಲಿ ರಕ್ಷಿತ್​ ಶೆಟ್ಟಿ ಸಿನಿಮಾ; ಟೈಟಲ್​ ಬದಲಾಯಿಸುತ್ತಾರಾ ಸಿಂಪಲ್ ಸ್ಟಾರ್​?

ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ರಿಚ್ಚಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರದ ಹೆಸರಲ್ಲಿ ಸಿನಿಮಾ ಬರುತ್ತಿದೆ. ಈಗ ಈ ಸಿನಿಮಾ ಶೀರ್ಷಿಕೆ ನಮ್ಮದು ಎಂದು ಹೇಮಂತ್​ ಹೆಸರಿನ ನಿರ್ದೇಶಕರೊಬ್ಬರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ. ಈಗ ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾದ ಟೈಟಲ್​ ಕೂಡ ವಿವಾದಕ್ಕೀಡಾಗಿದೆ.

ರಕ್ಷಿತ್​ ಶೆಟ್ಟಿನಟಿಸಬೇಕಿರುವ ರಿಚ್ಚಿ ಸಿನಿಮಾ ಟೈಟಲ್​ ನಮ್ಮದು ಎಂದು ಆರೋಪ ಮಾಡಿದ ನಿರ್ದೇಶಕರು "ನಾನು​ ಎರಡು ವರ್ಷಗಳ ಹಿಂದೆಯೇ ರಿಚ್ಚಿ ಸಿನಿಮಾ ಕೈಗೆತ್ತಿಕೊಂಡಿದ್ದೆ. ಈಗಾಗಲೇ ಶೇ.70 ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಹೀಗಿರುವಾಗ ರಕ್ಷಿತ್​ ಸಿನಿಮಾಗೂ ಅದೇ ರೀತಿಯ ಹೆಸರು ಇಡಲು ಹೇಗೆ ಸಾಧ್ಯ? ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಿರ್ದೇಶಕ ಹೇಮಂತ್ ಕಿಡಿಕಾರಿದ್ದಾರೆ.

ರಕ್ಷಿತ್ ಶೆಟ್ಟಿ ಸದ್ಯ ತಮ್ಮ ಮುಂದಿನ ಸಿನಿಮಾ 'ಪುಣ್ಯಕೋಟಿ' ಕತೆ ಬರೆಯುವಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ '777 ಚಾರ್ಲಿ' ಚಿತ್ರದ ಶೂಟಿಂಗ್​ ಆರಂಭಿಸಲಿದ್ದಾರಂತೆ. ಅದಕ್ಕಾಗಿ ಅವರು ವಿದೇಶಕ್ಕೆ ಹಾರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಅವರ ಈ ಸಿನಿಮಾದ ಶೇ 60ರಷ್ಟು ಶೂಟಿಂಗ್​ ಮುಗಿದಿದೆಯಂತೆ.

Edited By :
PublicNext

PublicNext

20/10/2020 07:49 pm

Cinque Terre

54.06 K

Cinque Terre

0