ಮುಂಬೈ: ಅಸ್ಸಾಂನ ವೈದ್ಯರೊಬ್ಬರು ಕೊರೊನಾ ವಾರ್ಡಿನಲ್ಲಿ ಪಿಪಿಇ ಕಿಟ್ ಧರಿಸಿದ್ದಾಗ 'ಘುಂಗ್ರೂ' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಟ್ವೀಟ್ ಮಾಡಿರುವ ಸೈಯದ್ ಫೈಜಾನ್ ಅಹ್ಮದ್ ಅವರು, ಕೋವಿಡ್ ಡ್ಯೂಟಿ ಸಹೋದ್ಯೋಗಿ, ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜಿನಲ್ಲಿ ಕಿವಿ, ಮೂಗು, ಗಂಟಲು ಶಸ್ತ್ರಚಿಕಿತ್ಸಕ ಡಾ.ಅರುಪ್ ಸೇನಾಪತಿ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. ಜೊತೆಗೆ 'ಅರುಪ್ ಅವರು ಕೋವಿಡ್ ಸೋಂಕಿತರನ್ನು ಸಂತೋಷಪಡಿಸಲು ಡಾನ್ಸ್ ಮಾಡುತ್ತಿದ್ದಾರೆ' ಎಂದು ಬರೆದುಕೊಂಡಿದ್ದರು.
ಸೈಯದ್ ಫೈಜಾನ್ ಅಹ್ಮದ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಹೃತಿಕ್ ರೋಷನ್, 'ನಾನು ಕೂಡ ಅವರ ಸ್ಟೆಪ್‌ಗಳನ್ನು ಕಲಿಯುತ್ತೇನೆ ಎಂದು ಡಾ ಅರುಪ್ ಅವರಿಗೆ ಹೇಳಿ. ಅಸ್ಸಾಂನಲ್ಲಿ ಒಂದು ದಿನ ಅವನಂತೆ ಚೆನ್ನಾಗಿ ಡಾನ್ಸ್ ಮಾಡುತ್ತೇನೆ. ಅದ್ಬುತ ಮನೋಭಾವ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
19/10/2020 05:49 pm