ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡದಲ್ಲಿದ್ದು ಮತ್ತೇ 'ಕನ್ನಡಿಗ' ನಾಗ್ತಾರಾ ರವಿಮಾಮ ಹೊಸ ಚಿತ್ರ ಹೊಸ ವೇಷ !

ಕನ್ನಡ ಚಿತ್ರರಂಗದಲ್ಲೋಂದು ಹೊಸ ಮೈಲಿಗಲ್ಲು ಸ್ಥಾಪಿಸಿದ ನಾಯಕ ನಟ ಕಮ್ ಡೈರೆಕ್ಟರ್ ಅಂದ್ರೇ ಅದು ರವಿಚಂದ್ರನ್ ಸಿನಿಮಾ ನಿರ್ಮಾಣದಿಂದ ಹಿಡಿದು ಸಾಹಿತ್ಯ ರಚನೆ ಜೊತೆ ಕ್ರೋಡಿಯೋಗ್ರಫಿ ಒಳಗೂ ಒಂದು ಕಾಲದಲ್ಲಿ ಟ್ರೇಂಡ್ ಸೆಟ್ ಮಾಡಿದ ಕಲಾವಿದ.

ದೃಶ್ಯ, ಮಾಣಿಕ್ಯದ ಸಿನಿಮಾ ನಂತರದಲ್ಲಿ ಅತಿ ಕುತೂಹಲ ಕೆರಳಿಸಿರುವ ರವಿ ಬೋಪಣ್ಣ, ತ್ರಿಶೂಲಂ ನಂತರದಲ್ಲಿ ಮತ್ತೊಂದು ಹೊಸ ಚಿತ್ರಕ್ಕಾಗಿ ರವಿಚಂದ್ರನ್ ಶೂಟಿಂಗ್ ಮೂಡ್ ಗೆ ಬಂದಿದ್ದಾರೆ. ನಿರ್ದೇಶಕ ಗಿರಿರಾಜ್ ಸಿನಿಮಾವೊಂದರಲ್ಲಿ ರವಿಚಂದ್ರನ್ ನಟನೆಗೆ ತಯಾರಾಗಿದ್ದು ದಸಾರದ ನಂತರ ಚಿತ್ರಿಕರಣ ಆರಂಭವಾಗಲಿದೆ.

ಸದ್ಯ ರವಿಮಾಮ ನಟಿಸಲಿರುವ ಸಿನಿಮಾ ಕನ್ನಡ ನಿಘಂಟು ಕುರಿತಾದ ಸಿನಿಮಾವಾಗಿದ್ದು ಚಿತ್ರದ ಟೈಟಲ್ "ಕನ್ನಡಿಗ" ಎಂದು ಹೆಸರಿಡಲು ಯೋಚಿಸಿದ್ದು ಈ ಸಿನಿಮಾದಲ್ಲಿ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ದೊರೆತಿದ್ದು 1850 ರ ದಶಕದಲ್ಲಿನ ಬ್ರೀಟಿಷ್ ಪೋರ್ಚುಗೀಸ್ ಆಳ್ವಿಕೆಯ ಕಾಲಘಟ್ಟದಲ್ಲಿ ಸಿನಿಮಾ ಸಾಗಲಿದೆ.

ಈಗಾಗಲೇ ಕುರುಕ್ಷೇತ್ರ ಸಿನಿಮಾವೊಂದರಲ್ಲಿ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡು ಕೃಷ್ಣನಾಗಿ ಮಿಂಚಿದ ರವಿಚಂದ್ರನ್ ಸಧ್ಯ ಈ ಸಿನಿಮಾದಲ್ಲಿ ಕನ್ನಡ ವಿದ್ವಾಂಸನ ಪಾತ್ರದಲ್ಲಿ ಹೇಗೆ ? ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದ್ದು ಈ 'ಕನ್ನಡಿಗ' ಚಿತ್ರದಲ್ಲಿ ಫರ್ಡಿನೆಂಡ್ ಕಿಟೆಲ್ ಪಾತ್ರವೂ ಬರಲಿದ್ದು ಈ ಪಾತ್ರವನ್ನು ಜೇಮೀ ಆಲ್ಟರ್ ಮಾಡುತ್ತಿದ್ದು ರವಿಚಂದನ್ ಜೇಮೀ ಆಲ್ಟರ್ ಪರದೆಯ ಮೇಲೆ ಎನು ಸ್ಟೋರಿ ಹೊತ್ತು ಬರಲಿದ್ದಾರೆ ಎಂಬುದನ್ನ ಸಿನಿಮಾ ಬರೋವರೆಗೂ ಕಾಯಲೇಬೇಕು.

Edited By :
PublicNext

PublicNext

15/10/2020 07:02 pm

Cinque Terre

39.28 K

Cinque Terre

1