ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರಿಕ್ ಪಾರ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಿಕ್ಕಿ, ವಾಸ್ತು ಪ್ರಕಾರ,ಅವನೇ ಶ್ರೀಮನ್ನಾರಾಯಣ ಹೀಗೆ ಸಾಲು ಹಿಟ್ ಚಿತ್ರ ಹಾಗೂ ಡಿಫರೇಂಟ್ ಮ್ಯಾನರಿಸ್ಂ ಸಿನಿಮಾಗಳ ಮೂಲಕ ಅತೀ ಕಡಿಮೆ ಅವಧಿಯಲ್ಲಿ ನಾಯಕ ನಿರ್ದೇಶಕನಾಗಿ ಮಿಂಚಿದ ರಕ್ಷಿತ್ ಶೆಟ್ಟಿ ಕಳೆದ ಹೋದ ಒಂದು ಮರಳಿ ಸಿಕ್ಕಿದ್ದಕ್ಕೆ ಪುಲ್ ಖುಷ್ ಆಗಿದ್ದಾರೆ.
ಇದೇನಪ್ಪಾ ? ಕಳೆದು ಹೋದ ವಸ್ತು ಏಂದಾಕ್ಷಣ ಇಲ್ಲಿ ಪ್ರೀತಿ ಪ್ರೇಮ್ ಅಲ್ಲಾ ಬೇರೊಂದು ಇದೇ ಅದುವೇ ರಕ್ಷಿತ್ ಶೆಟ್ಟಿ ಅಭಿನಯದ 'ಕನ್ಫೆಷನ್ ಆಪ್ ಡಸ್ಟ ಬಿನ್' ಈ ಹೆಸರಿನ ಕಿರು ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದು ಆ ಕಿರುಚಿತ್ರ ಅರ್ಧಕ್ಕೆ ನಿಂತುಹೋಗಿದ್ದು ಚಿತ್ರದ ಫೂಟೇಜ್ ಕಳೆದುಕೊಂಡಿದ್ದರಂತೆ ಅದೀಗ ಮರಳಿ ಸಿಕ್ಕಿದೆ.
ಹೀಗಾಗಿ ಮತ್ತೆ ಕಿರು ಚಿತ್ರದ ಕೆಲಸ ಆರಂಭಿಸಿರುವ ಶೆಟ್ಟಿ ಅದಕ್ಕೆ ಹೊಸರೂಪ ಕೊಟ್ಟು ತೆರೆಗೆ ತರಲು ಸಜ್ಜಾಗಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿರುವ ರಕ್ಷಿತ್ ಶೆಟ್ಟಿ ಕಳೆದು ಹೋದ ಎಂಟು ವರ್ಷಗಳ ನಂತರದಲ್ಲಿ ಅಂಜನೀಶ್ ಲೋಕನಾಥ್ ಜೊತೆಗೆ ನೋಡುಗರಲ್ಲಿ ಟೈಟಲ್ ಮೂಲಕ ಕುತೂಹಲ ಹುಟ್ಟಿಸಿರುವ 'ಕನ್ಫೆಷನ್ ಆಫ್ ಡಸ್ಟ್ ಬಿನ್ ಕೆಲಸ ತುಂಬಾ ಫನ್ ಆಗಿದೆ ಎಂದಿದ್ದಾರೆ.
ಸದ್ಯ ಈಗಾಗಲೇ ಚಾರ್ಲಿ 777, ಹಾಗೂ ಬೀಮಸೇನಾ ನಳಮಹಾರಾಜ್, ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳು ಸಹ ಟೈಟಲ್ ಮೂಲಕ ಪ್ರಭಾವ ಹೆಚ್ಚಿಸಿದ್ದು ರಕ್ಷಿತ್ ಶೆಟ್ಟಿ ಡಿಪರೇಂಟ್ ಅವತಾರ ಮತ್ತೇನು ಕಮಾಲ್ ಮಾಡಲಿದೆ ಕಾದು ನೋಡಬೇಕಿದೆ.
PublicNext
15/10/2020 11:03 am