ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆನ್ ಲೈನ್ ಸಂವಾದದ ಮೂಲಕ ಅನಿವಾಸಿ ಭಾರತೀಯರ ಮನಸ್ಸು ತಟ್ಟಿದ ಕನಸುಗಾರ

ಹುಬ್ಬಳ್ಳಿ: ಇತ್ತೀಚಿನ ಕೋವಿಡ್ ಮಹಾ ಮಾರಿಯ ಸಂಕಷ್ಟದ ನಡುವೆಯೂ ದೂರದ ದೇಶದಲ್ಲಿ ನೆಲೆಸಿರುವ ಎನ್.ಆರ್.ಐ ಕನ್ನಡಿಗರು ಹಿರಿಯ ನಟ ರವಿಚಂದ್ರನ್ ಅವರ ಜೊತೆ ಆನ್ಲೈನ್ ಸಂವಾದ ನಡೆಸಿದ್ದಾರೆ.

ಉತ್ತರ ಕರ್ನಾಟಕ ಭಾಗದವರಾದ ಕೌನ್ಸಿಲರ್ ರಾಜೀವ ಮೇತ್ರಿ (ಲಂಡನ್) ಹಾಗೂ ಈಶ್ವರ್ ಶೆಗುಣಸಿ (ಐರ್ಲೆಂಡ್ ) ಇವರು ಸ್ಥಾಪಿಸಿರುವ “ಅನಿವಾಸಿ ಭಾರತೀಯ ಕನ್ನಡ ಸಂಘ”ದ ಮುಖಾಂತರ ಅಂತರ್ ಜಾಲದ ಜೂಮ್ ವೇದಿಕೆಯ ಮುಖಾಂತರ ಪ್ರತಿವಾರ ಕನ್ನಡದ ಹಲವಾರು ಆನ್ ಲೈನ್ ಸಂವಾದ ಕಾರ್ಯಕ್ರಮ ಆಯೋಜಿಸಿ ನಡೆಸಿಕೊಡುತ್ತಿದ್ದಾರೆ‌. ಹೀಗಾಗಿ ಈ ವಾರದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ರವಿಚಂದ್ರನ್ ರವರು ಭಾಗವಹಿಸಿ ಒಂದು ಗಂಟೆಗೂ ಹೆಚ್ಚು ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಸುಮಾರು 25 ದೇಶಗಳ ಕನ್ನಡಿಗರನ್ನು ಉದ್ದೇಶಿಸಿ ಕನ್ನಡ ಚಿತ್ರರಂಗದ ಅನೇಕ ನೆನಪುಗಳನ್ನು ಮೆಲುಕು ಹಾಕಿದ ರವಿಚಂದ್ರನ್ ಅವರ ಚಿತ್ರ ರಂಗದಲ್ಲಿ ನಡೆದುಬಂದ ದಾರಿಯ ಬಗ್ಗೆ ನೆನೆಸಿಕೊಂಡು ಅ‌ನಿವಾಸಿ ಕನ್ನಡಿಗರ ಜೊತೆ ಮನದಾಳದ ಮಾತುಗಳನ್ನಾಡಿದರು. ಅಲ್ಲದೇ

ಕನ್ನಡ ಚಿತ್ರ ಪ್ರೇಮಿಗಳ ಜೊತೆ ಪ್ರೇಮಲೊಕ, ಪುಟ್ನಂಜ ಸೇರಿದಂತೆ ತಮ್ಮ ಹಲವು‌ ಚಿತ್ರಗಳ ಅಭಿನಯ ಹಾಗೂ ಚಿತ್ರೀಕರಣದ ಬಗ್ಗೆ ಮಾಹಿತಿ ಹಂಚಿಕೊಂಡರು. ಅಲ್ಲದೇ ಹೊರ ದೇಶಗಳಿಗೆ ಚಿತ್ರೀಕರಣಕ್ಕೆ ಬಂದಾಗ ನಿಮ್ಮನ್ನು ಭೇಟಿಯಾಗುತ್ತೇನೆ. ಒಂದು ದಿನ ನಿಮ್ಮ ಮನೆಗಳಲ್ಲಿದ್ದು ಹೋಗುತ್ತೇನೆ ಎಂಬ ಭರವಸೆ ನೀಡಿದರು.

ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದುಬೈ, ಕತಾರ್, ಸೌದಿ ಅರೇಬಿಯಾ, ಓಮನ್, ಕುವೈತ್, ಆಫ್ರಿಕಾ, ಐರ್ಲೆಂಡ್ ಕೆನಡಾ,ಯುರೋಪ್ ಸೇರಿದಂತೆ ಸುಮಾರು 25 ದೇಶಗಳ ಕನ್ನಡ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಶನಿವಾರ ಹಾಗೂ ಭಾನುವಾರ ಇಂತಹ ಕಾರ್ಯಕ್ರಮ ನಡೆಯುತ್ತಿದ್ದು, ಕನ್ನಡದ ಹೆಸರಾಂತ ಕವಿಗಳು, ನಗೆ ಹರಟೆಗಾರರು, ಶರಣರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಿ ಕನ್ನಡದ ಕಂಪನ್ನ ಮತ್ತಷ್ಟು ವ್ಯಾಪಕವಾಗಿ ಬಿಂಬಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಸಾಧಕರಾದ ಮುಖ್ಯಮಂತ್ರಿ ಚಂದ್ರು, ಸಾಯಿಕುಮಾರ್, ದೇವರಾಜ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ರಾಜು ತಾಳಿಕೋಟೆ, ಮುಂತಾದವರು ಭಾಗವಹಿಸಿ ಚಿತ್ರರಂಗದ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು, ಅನಿವಾಸಿ ಕನ್ನಡಿಗರಿಗೆ ಕೊರೋನಾ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಈ ಆನ್ ಲೈನ್ ಸಂವಾದ ಸಹಕಾರಿಯಾಗಿದೆ.

Edited By :
PublicNext

PublicNext

12/10/2020 07:37 pm

Cinque Terre

73.82 K

Cinque Terre

0