ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಮುರುಘ ಶ್ರೀ ಬಂಧನ ನಂತರ ಮಠಕ್ಕೆ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಭೇಟಿ

ಚಿತ್ರದುರ್ಗ: ಚಿತ್ರದುರ್ಗದ ಮುರುಘ ಮಠಕ್ಕೆ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಅವರು ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಮುರುಘ ಶರಣರ ಬಂಧನದ ಮೊದಲು ಎಸ್. ಕೆ. ಬಸವರಾಜನ್ ರವರನ್ನು ಆಡಳಿತಾಧಿಕಾರಿ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಕೂಡ ಶ್ರೀಮಠಕ್ಕೆ ಭೇಟಿ ‌ನೀಡಿರಲಿಲ್ಲ.

ಇನ್ನು, ಶ್ರೀಗಳ ಬಂಧನ ನಂತರ ಇದೇ ಮೊದಲ ಬಾರಿಗೆ ಬಸವರಾಜನ್ ದಂಪತಿ ಮಠಕ್ಕೆ ಭೇಟಿ‌ ನೀಡಿದ್ದಾರೆ.

ಸದ್ಯ ಶ್ರೀ ಮಠದ ಪ್ರಭಾರ ಉಸ್ತುವಾರಿ ಆಗಿರುವ ಶ್ರೀ ಮಹಾಂತ ರುದ್ರೇಶ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಗದ್ದುಗೆ ಪೂಜಾ ಕಾರ್ಯಕ್ರಮದಲ್ಲಿ ಎಸ್ ಕೆಬಿ ದಂಪತಿ ಜೊತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Edited By : Nagesh Gaonkar
PublicNext

PublicNext

06/10/2022 01:56 pm

Cinque Terre

23.34 K

Cinque Terre

0

ಸಂಬಂಧಿತ ಸುದ್ದಿ