ಚಳ್ಳಕೆರೆ : ನಗರದೆಲ್ಲೆಡೆ ಹನುಮಂತನ ಜಯಂತಿಯನ್ನು ಭಕ್ತಿಭಾವ, ಸಡಗರದಿಂದ ಆಚರಿಸಲಾಯಿತು. ನಗರದ ಮರಡಿ ಆಂಜನೇಯ ದೇವಸ್ಥಾನ, ಬಯಲು ಹನುಮ ದೇವಸ್ಥಾನ ,ಕರಕಲ್ ಆಂಜನೇಯ ದೇವಸ್ಥಾನ ಹಾಗೂ ಶ್ರೀರಾಮ ಮಂದಿರಗಳಲ್ಲಿ ಮುಂಜಾನೆಯಿಂದಲೇ ದೇವರ ವಿವಿಧ ಹೂಗಳಿಂದ ದೇವಸ್ಥಾನ ಅಲಂಕಾರ . ಆಂಜನೇಯ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಹೋಮ, ವಿಶೇಷ ಪೂಜೆಗಳು ಆರಂಭವಾಗಿದ್ದವು. ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ರಾಮಭಕ್ತ ಹನುಮನ ದರ್ಶನ ಪಡೆದು ತೀರ್ಥ ಪ್ರಸಾದ ಪಡೆದು ಪುನೀತರಾದರು.
Kshetra Samachara
13/12/2024 01:31 pm