ಹೊಳಲ್ಕೆರೆ: ತಾಲ್ಲೂಕಿನ ದುಮ್ಮಿ ಗೊಲ್ಲರ ಹಟ್ಟಿಯ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ ಸ್ವಾಮಿ ಜಾತ್ರೆ ಡಿ.17 ರಂದು ನಡೆಯಲಿದೆ.
ಜಾತ್ರೆಯ ಅಂಗವಾಗಿ ಡಿ.16 ರಿಂದ 18 ರವರೆಗೆ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ರಾಜ್ಯದ ನಾನಾ ಭಾಗಗಳ ಸಾವಿರಾರು ಜನ ಭಾಗವಹಿಸುವರು.
ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಕಲೆಗಳು ಅನಾವರಣಗೊಳ್ಳಲಿವೆ. ಪಲ್ಲಕ್ಕಿ ಉತ್ಸವ, ಕದಳಿ ಪೂಜೆ, ಎಲೆ ಪೂಜೆ, ಉಗ್ಗದ ಗಡಿಗೆ, ಹಾಲುಕಂಬಿ, ಹರಗಿನ ಮುದ್ರೆ, ಕಂಚಿನ ಕಡಗಗಳಿಗೆ ವಿಶೇಷ ಪೂಜೆಗಳು ನಡೆಯಲಿವೆ. ಮಹಿಳೆಯರ ವೀರಗಾಸೆ, ಕೀಲು ಕುದುರೆ, ಪೂಜಾಕುಣಿತ, ಕರಡಿ ಮಜಲು, ನಂದಿ ಧ್ವಜ ಕುಣಿತ, ಸೋಬಾನೆ ಪದ, ಮಂಡ್ಯದ ಪೂಜಾ ಕುಣಿತ, ಜನಪದ ಹಾಡು, ಲಂಬಾಣಿ ನೃತ್ಯ ಮತ್ತಿತರ ಕಲಾಪ್ರಕಾರಗಳು ಜಾತ್ರೆಯಲ್ಲಿ ಮೇಳೈಸಲಿವೆ.
Kshetra Samachara
13/12/2024 03:59 pm