ಚಳ್ಳಕೆರೆ ಭಕ್ತಿ ಭಾವಾ ಮತ್ತು ಧಾರ್ಮಿಕ ಭಾವನೆಗಳ ನೆಲೆ ನಾಡು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಎಂದು ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು .
ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ .ಎಲ್ಲಿ ಭಕ್ತಿ ಮತ್ತು ನಂಬಿಕೆಗಳಿರುತ್ತದೆಯೋ ಅಲ್ಲೇ ಶಾಂತಿ ಮತ್ತು ಸಮೃದ್ಧಿ ನೆರಸಿರುತ್ತದೆ ಜಾತಿ ಪಕ್ಷ ಮತ್ತು ವರ್ಗರಹಿತವಾದಂತ ಸಮಾಜ ನಿರ್ಮಾಣವಾಗಬೇಕಾದರೆ ಇಂತಹ ಭಾವನೆಗಳು ಸರ್ವಕಾಲಕ್ಕೂ ಜೀವಂತವಾಗಿರಬೇಕು ಈ ತಾಲೂಕುಗಳಲ್ಲಿರುವಂತಹ ಈ ವಾತಾವರಣವನ್ನು ರಾಜ್ಯದ ಬೇರೆ ಎಲ್ಲೂ ಕೂಡ ಕಾಣಲು ಸಾಧ್ಯವಿಲ್ಲ ಕರಿಬಸವೇಶ್ವರ ಸ್ವಾಮಿ ಇಡೀ ತಾಲೂಕಿನ ಎಲ್ಲ ಜನತೆಗೆ ಸುಖ ಶಾಂತಿ ನೆಮ್ಮದಿ ಮತ್ತು ಐಶ್ವರ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಮನವಿ ಮಾಡಿದರು .ಇದೇ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಗ್ರಾಮ ಪಂಚಾಯತಿ ಸದಸ್ಯರುಗಳಾದಂತ ರೇವಣ್ಣ ಶೈಲಜಾ ತಿಪ್ಪೇಸ್ವಾಮಿ ಬಿಜೆಪಿ ಮುಖಂಡರಾದ ಕೋಟೆಪ್ಪ ಮುಂತಾದವರು ಉಪಸ್ಥಿತರಿದ್ದರು
Kshetra Samachara
13/12/2024 01:47 pm