ಹೊಳಲ್ಕೆರೆ: ತಾಲೂಕಿನ ದುಮ್ಮಿ ಗೊಲ್ಲರಹಟ್ಟಿ ಜುಂಜಪ್ಪ ಸ್ವಾಮಿ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಪೋಲಿಸ್ ಇಲಾಖೆಯಿಂದ ಶಾಂತಿ ಸಭೆ ಹಾಗೂ ರಸ್ತೆ ತಡೆ ಮಾಸಾಚರಣೆ ಹಾಗೂ ನಶೆ ಮುಕ್ತ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .ಈ ಸಂದರ್ಭದಲ್ಲಿ ಹೊಳಲ್ಕೆರೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎಂ ಬಿ .ಚಿಕ್ಕಣ್ಣ ಮಾತನಾಡಿ ,ಶ್ರೀ ಜುಂಜಪ್ಪ ಸ್ವಾಮಿ ಜಾತ್ರೆ ಸ್ವಾಮಿ ಜಾತ್ರೆ ಶಾಂತಿತವಾಗಿ ವ್ಯವಸ್ಥಿತವಾಗಿ ನಡೆಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರು ಕಾನೂನಿನ ಅರಿವನ್ನು ತಿಳಿಯಬೇಕು ಕಡ್ಡಾಯವಾಗಿ ಪ್ರತಿಯೊಬ್ಬರು ಹೆಲ್ಮಟ್ ಬಳಸಬೇಕು, ಅಪಘಾತಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿರಬೇಕು ,ಬೈಕುಗಳನ್ನ ಓಡಿಸುವ ಸವಾರರು ಮದ್ಯಪಾನವನ್ನು ಸೇವನೆ ಮಾಡಿ ಓಡಿಸಬಾರದು, ಅಪರಾಧಿ ಕೃತ್ಯಗಳನ್ನು ಮಾಡಬಾರದು ಯುವಕರು ನಶೆ ಮುಕ್ತ ಮಾದಕ ವಸ್ತುಗಳನ್ನು ಸೇವನೆ ಮಾಡಬಾರದು .ಜೂಜಾಟ ಮಟ್ಕಾ ಮತ್ತಿತರೆ ದಂಧೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಕಠಿಣ ಕಾಮ ಕೈಗೊಳ್ಳಲಾಗುವುದು ಎಂದರು.
Kshetra Samachara
14/12/2024 09:04 am