ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ಕಟ್ಟಿಸಿದ ತೊಟ್ಟಿಗಳು ಇಂದು ಕಸದ ತೊಟ್ಟಿಗಳಾಗಿ ಪರಿಣಮಿಸಿವೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯೊಳಗೆ ಪ್ರತಿ ಗ್ರಾ.ಪಂ.ಯಲ್ಲಿ ನಿರ್ಮಿಸಿದ ತೊಟ್ಟಿಗಳು ನೀರಿಲ್ಲದೆ ಇಂದು ಒಣಗಿವೆ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬುಡಕಟ್ಟು ಸಂಸ್ಕೃತಿ ಎಸ್‌ಟಿ ಸಮುದಾಯ ಹಟ್ಟಿಗಳನ್ನು ಹೊಂದಿರುವ ಪೆತ್ತಮ್ಮರಹಟ್ಟಿ, ವರವಿನೋರಹಟ್ಟಿ, ಬಂಗಾರದೇವರಹಟ್ಟಿ ಗ್ರಾಮಗಳ ಜನರು ಕೃಷಿ ಚಟುವಟಿಕೆ ಜತೆಗೆ ಪಶು, ಕುರಿ ಸಂಗೋಪನೆ ಮುಖ್ಯ ಕಸುಬಾಗಿದ್ದು ದೇವರ ಎತ್ತುಗಳು ಹಾಗೂ ಕುರಿ ಜಾನುವಾರ ಸಂಖ್ಯೆ ಹೆಚ್ಚಾಗಿವೆ. ಇಲ್ಲಿನ ಜನರು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಜಾನುವಾರುಗಳು ಕುಡಿಯಲು ನೀರು ಸಿಗದೆ ದೂರದ ತೋಟಗಳಿಗೆ ಹೋಗುವ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದಕ್ಕೆ ಎಚ್ಚೆತ್ತುಕೊಳ್ಳಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ಸ್ಥಳೀಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Kshetra Samachara
12/10/2022 02:02 pm