ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ತಡರಾತ್ರಿ ಸುರಿದ ಮಳೆಗೆ ಭಾರೀ ಅನಾಹುತ: ಗುಡಿಸಲು, ಮನೆಗಳು ಜಲಾವೃತ

ಚಿತ್ರದುರ್ಗ: ತಡರಾತ್ರಿ ಸುರಿದ ಭಾರೀ ಮಳೆಗೆ ಚಳ್ಳಕೆರೆ ತಾಲೂಕಿನ ಸಿದ್ದೇಶನ ದುರ್ಗದ ಗೌರಿಪುರದಲ್ಲಿ ಮನೆಗಳು ಹಾನಿಗೊಳಗಾಗಿದ್ದು, ಜಲಾವೃತವಾಗಿರೋ ಘಟನೆ ನಡೆದಿದೆ.

ಗ್ರಾಮದ ಸುಮಾರು 18 ಗುಡಿಸಲುಗಳಿಗೆ ನೀರು‌ ನುಗ್ಗಿದ್ದು ಅಪಾರ ಹಾನಿಯಾಗಿದೆ. ಮನೆಗಳಲ್ಲಿ ಇದ್ದ ದವಸ, ಧಾನ್ಯ ,ಪಾತ್ರೆಗಳು ಹಾಗೂ ದಾಖಲೆಗಳು‌ ನೀರು ಪಾಲಾಗಿದೆ. ಇನ್ನೂ ತಾಲೂಕು ಪಂಚಾಯತ್ ಅಧಿಕಾರಿಗಳು ಗಂಜಿ ಕೇಂದ್ರ ತೆರೆಯುವ ಮೂಲಕ ಸಂತ್ರಸ್ತರಿಗೆ ಆಶ್ರಯ ನೀಡಿದ್ದಾರೆ.

ಸುಮಾರು18 ಕುಟುಂಬಗಳ ಸಂತ್ರಸ್ತರಿಗೆ ಗ್ರಾಮದ ಹೊರವಲಯದಲ್ಲಿ ತಾಪಂ.ಹಾಗೂ ಗ್ರಾಮ ಪಂಚಾಯತ್ ಮೂಲಕ ನೆರವು ನೀಡಿದ್ದಾರೆ. ಸ್ಥಳಕ್ಕೆ ಖುದ್ದಾಗಿ ತಾಪಂ.ಸಹಾಯಾಕ ನಿರ್ದೇಶಕ ಸಂತೋಷ, ಹಾಗೂ ಸಂಪತ್ ಕುಮಾರ್ ಪಿಡಿಓ ಹನುಮಂತರಾಜು, ಗ್ರಾಮಪಂಚಾಯತಿ ಅಧ್ಯಕ್ಷ ಮೌರ್ಯ, ಗ್ರಾಮ‌ಲೆಕ್ಕಾಧಿಕಾರಿ ದೇವರಾಜ್ ಇತರರು ಭೇಟಿ ‌ನೀಡಿದ್ದಾರೆ.

Edited By :
PublicNext

PublicNext

13/10/2022 02:45 pm

Cinque Terre

29.88 K

Cinque Terre

0

ಸಂಬಂಧಿತ ಸುದ್ದಿ