ಚಿತ್ರದುರ್ಗ- ಚಿತ್ರದುರ್ಗದಲ್ಲಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರ ಮೇಲೆ ವಕ್ಫ್ ಆಸ್ತಿ ಒತ್ತುವರಿ ಆರೋಪದ ಬೆನ್ನಲ್ಲೇ ಆಸ್ತಿ ಕಬಳಿಕೆ ವಿರುದ್ಧ ಧ್ವನಿ ಎತ್ತಿದ್ದ RTI ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಫೋನ್ ಕಾಲ್ ಮಾಡಿ ಬೆದರಿಕೆ ಹಾಕಿರುವ ಆಡಿಯೋ ಡಿ.14 ಬೆ.9 ಗಂಟೆಗೆ ವೈರಲ್ ಕೂಡಾ ಆಗಿದೆ.
ಜೀವ ರಕ್ಷಣೆ ಕೋರಿ ಚಿತ್ರದುರ್ಗ ಎಸ್ಪಿಗೆ RTI ರಕ್ಷಣೆ ಕೋರಿ ಮನವಿ ಕೂಡಾ ನೀಡಿದ್ದಾರೆ. ಎಸ್ಪಿ ರಂಜಿತ್ ಕುಮಾರ್ ಬಂಡಾರು ಗೆ ಮುಸ್ತಾಕ್ ಅಹಮದ್ ಮನವಿ ಸಲ್ಲಿಸಿದ್ದಾರೆ. ಮುಸ್ತಾಕ್ ಅಹಮದ್ ಗೆ ಜೀವ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದೆ. 2 ವರ್ಷಗಳಿಂದ ವಕ್ಫ್ ಆಸ್ತಿ ಉಳಿಸುವಂತೆ ಮುಸ್ತಾಕ್ ಅಹಮದ್ ಹೋರಾಟ ಮಾಡುತ್ತಿದ್ದರು. ಹೋರಾಟ ಮಾಡಿದ್ದಕ್ಕೆ ಮುಸ್ತಾಕ್ ಅಹಮದ್ ಗೆ ಜೀವ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ವಕ್ಫ್ ಜಮೀನು ಉಳಿಸಿ, ಹಣಕಾಸು ಲೆಕ್ಕ ನೀಡುವಂತೆ ಮುಸ್ತಾಕ್ ಹೋರಾಟ ಮಾಡುತ್ತಿದ್ದರು. ಮಾಹಿತಿ ನೀಡದೇ ವಕ್ಫ್ ಜಿಲ್ಲಾ ಅಧಿಕಾರಿಗಳು ವಿಳಂಬ ಮಾಡ್ತಿದಾರೆ. ವಕ್ಫ್ ಆಸ್ತಿ ಉಳಿಸಲು ಪ್ರತಿಭಟನೆ ಮಾಡಿದ್ರೆ, ಕರೆ ಮಾಡಿ ಧಮ್ಕಿ ಹಾಕ್ತಾರೆ ಎಂದು ಆರೋಪಿಸಿದ್ದಾರೆ.
PublicNext
14/12/2024 02:41 pm