ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆ ಮತ್ತು ಜಾಗೃತಿ

ಮೊಳಕಾಲ್ಮುರು: ಕೊಂಡ್ಲಹಳ್ಳಿ ಸರ್ಕಾರಿ ಪಿಯು ಕಾಲೇಜುನಲ್ಲಿ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಿಎಸ್ ಐ ಪಾಂಡುರಂಗಪ್ಪ ಮಾತನಾಡಿ,ಡಿಜಿಟಲ್​ ಯುಗದಲ್ಲಿ ವ್ಯಕ್ತಿಗಳ ದುರ್ಬಲತೆ ಮತ್ತು ಅಗತ್ಯತೆಗಳನ್ನು ಬಂಡವಾಳವಾಗಿಸಿಕೊಂಡ ಸೈಬರ್​ ಅಪರಾಧಿಗಳು ಯುವ ಜನರನ್ನು ಮೋಸಮಾಡುತ್ತಿದ್ದಾರೆ ಅದರಲ್ಲೂ ಇತ್ತೀಚಿನ ದಿನದಲ್ಲಿ ಸೈಬರ್​ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಆದಷ್ಟು ಜಾಗೃತಿ ವಹಿಸಬೇಕು.

ಸೈಬರ್​ ಅಪರಾಧಿಗಳು ಹೆಚ್ಚಾಗಿ ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಜನರನ್ನು ಗುರಿಯಾಗಿ ಮೆಸೇಜ್ ಮತ್ತು ಓಟಿಪಿ ಕಳಿಸಿ ನಕಲಿ ಖಾತೆಗಳನ್ನು ಸೃಷ್ಟಿಸಿ ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸುತ್ತಾರೆ.ಅಷ್ಟೇ ಅಲ್ಲದೇ ಅಶ್ಲೀಲ ನಕಲಿ ವಿಡಿಯೋ, ಫೋಟೋವನ್ನು ಸೃಷ್ಟಿಸುತ್ತಿದ್ದು, ಕಟುಂಬಸ್ಥರನ್ನು ಬೆದರಿಸುವ ಯತ್ನ ಮಾಡ ಹಣ ದೋಚಲು ಮುಂದಾಗುತ್ತಿರುವ ಪ್ರಕರಣಗಳು ಹೆಚ್ಚಿತ್ತಿವೆ.

ಈ ರೀತಿಯ ಯಾವುದಾದರೂ ಬೆದರಿಕೆ ಕರೆ ಅಥವಾ ಆರ್ಥಿಕ ನಷ್ಟದ ಅನುಭವ ಆಗುತ್ತಿದ್ದರೆ, ತಕ್ಷಣಕ್ಕೆ ಸೈಬರ್​ ಪೊಲೀಸರು ದೂರು ನೀಡುಬೇಕು.ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಎಸ್ ಬಿಐ, ಸೇರಿದಂತೆ ಹಲವು ನಕಲಿ ಎಪಿಕೆಗಳನ್ನು ಬಳಸಿ ಹಣ ಎಗರಿಸುತ್ತಾರೆ ಇಂತಹ ಯಾವುದೇ ಆಪ್ ಗಳನ್ನು ಡೌನ್ಲೋಡ್ ಮಾಡಬಾರದು ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

14/12/2024 02:31 pm

Cinque Terre

460

Cinque Terre

0