ಚಿಕ್ಕಬಳ್ಳಾಪುರ: ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಕ್ಯಾಷಿಯರ್ ಕಲ್ಲೂಡಿ ಗ್ರಾಮದ ಸುನಿಲ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಟದಹೊಸಳ್ಳಿಯ ಕೆರೆ ಬಳಿ ಯುವಕ ನೇಣಿಗೆ ಶರಣಾಗಿದ್ದಾರೆ. ಕಲ್ಲೂಡಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಬಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬ್ಯಾಂಕ್ ಮ್ಯಾನೇಜರ್ 84 ಲಕ್ಷ ರೂಪಾಯಿ ವಂಚಿಸಿ ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಎಸ್ಕೇಪ್ ಆಗಿರುವ ಮ್ಯಾನೇಜರ್ ಜೊತೆ ಸುನಿಲ್ ಬಾಗಿಯಾಗಿರುವ ಶಂಕೆ ಶುರುವಾಗಿದೆ.
ವಂಚನೆ ಪ್ರಕರಣ ತನ್ನ ಮೇಲೆ ಬರುತ್ತೆ ಅಂತ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬ ಅನುಮಾನ ಪೊಲೀಸರನ್ನ ಕಾಡಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
06/10/2022 03:52 pm