ಚಿಕ್ಕಬಳ್ಳಾಪುರ: ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.
ಹಂಡಿಗನಾಳ ಗ್ರಾಮದ ಶ್ರೀರಾಮಪ್ಪ (60), ಪತ್ನಿ ಸರೋಜಮ್ಮ (55) ಹಾಗೂ ಮಗ ಮನೋಜ್ (21) ಮೃತ ದುರ್ದೈವಿಗಳು. ಮನೆ ಮಗಳು ಅಂತರ್ಜಾತಿ ಯುವಕನನ್ನು ಪ್ರೀತಿಸಿ ಆತನೊಂದಿಗೆ ಓಡಿಹೋಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಗಳು ನಾಪತ್ತೆಯಾಗಿದ್ದರ ಬಗ್ಗೆ ನಿನ್ನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ದೂರು ನೀಡಿದ್ದಾರೆ. ಇದೀಗ ಸಾಮೂಹಿಕ ಆತ್ಮಹತ್ಯೆಯಿಂದ ಹಂಡಿಗನಾಳ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
04/10/2022 01:38 pm