ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2,500 ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್ ಕಂಪನಿ

ಭಾರತದ ಜನಪ್ರಿಯ ಶೈಕ್ಷಣಿಕ ಆ್ಯಪ್ ಬೈಜೂಸ್ ಇಂಡಿಯಾ 2,500 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿದೆ.ಕಂಪನಿಯನ್ನು ಲಾಭದತ್ತ ಕೊಂಡೊಯ್ಯಲು ಈ ಕ್ರಮ ಕೈಗೊಂಡಿರುವುದಾಗಿ ಟೈಗರ್ ಗ್ಲೋಬಲ್ ಒಡೆತನದ ಬೈಜೂಸ್ ಕಂಪನಿ ತಿಳಿಸಿದೆ.

ಮುಂಬರುವ ವರ್ಷದಲ್ಲಿ ಸುಮಾರು 10,000ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಬೈಜೂಸ್ ಹೊಂದಿದೆ ಎಂದು ಹೇಳಿಕೊಂಡಿದೆ. ಸದ್ಯ ಕಂಪನಿಯಲ್ಲಿ 50,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ನಾವು ಸುಸ್ಥಿರ ಅಭಿವೃದ್ಧಿಗಾಗಿ ಕೆಲ ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿಯ ಸಿಇಒ ಮೃಣಾಲ್ ಮೋಹಿತ್ ತಿಳಿಸಿದ್ದಾರೆ. ಕಂಪನಿ ಇತ್ತೀಚೆಗೆ ಆಕಾಶ್ ಕೋಚಿಂಗ್ ಸೇರಿದಂತೆ ಅನೇಕ ಶೈಕ್ಷಣಿಕ ಕಂಪನಿಗಳನ್ನು ಸುಮಾರು 2.5 ಬಿಲಿಯನ್ ಡಾಲರ್ ವ್ಯಯಿಸಿ ಖರೀದಿಸಿದೆ.

Edited By : Nirmala Aralikatti
PublicNext

PublicNext

13/10/2022 10:20 am

Cinque Terre

65.9 K

Cinque Terre

3

ಸಂಬಂಧಿತ ಸುದ್ದಿ