ಮುಂಬೈ: ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ಇಂದು (ಬುಧವಾರದಂದು) ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 81.93ಕ್ಕೆ ಕುಸಿತವಾಗಿದೆ.
ಡಾಲರ್ ಬೆಲೆ ಬುಧವಾರದಂದು ಹೊಸ ಗರಿಷ್ಠ ಮಟ್ಟಕ್ಕೆ ಏರಿದ ಕಾರಣ ರೂಪಾಯಿ ಮೌಲ್ಯ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ಕರೆನ್ಸಿ 40 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 81.93ಕ್ಕೆ ತಲುಪಿದೆ. 2022ರ ಕ್ಯಾಲೆಂಡರ್ ವರ್ಷದಲ್ಲಿ ಇಲ್ಲಿಯವರೆಗೆ ಡಾಲರ್ ವಿರುದ್ಧ ದೇಶೀಯ ಕರೆನ್ಸಿ ಸುಮಾರು 9 ಪ್ರತಿಶತದಷ್ಟು ಕುಸಿದಿದೆ.
PublicNext
28/09/2022 12:55 pm