ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡೂವರೆ ವರ್ಷದಲ್ಲೇ 13 ಪಟ್ಟು ಹೆಚ್ಚಾಯ್ತು ಅದಾನಿ ಸಂಪತ್ತು; ವಿಶ್ವದ ನಂ. 3 ಶ್ರೀಮಂತ

ನವದೆಹಲಿ: ಈ ವರ್ಷ ಗೌತಮ್‌ ಅದಾನಿ ವಿಶ್ವದ ಯಾವುದೇ ಉದ್ಯಮಿಯೂ ಮಾಡದ ಸಾಧನೆ ಮಾಡಿದ್ದಾರೆ. ಅದೇನೆಂದರೆ ಅತೀ ಹೆಚ್ಚು ಸಂಪತ್ತನ್ನು ಸಂಪಾದಿಸಿದ್ದು. ಗೌತಮ್‌ ಅದಾನಿ ಆಸ್ತಿ ಒಂದೇ ಸಮನೆ ಏರಿಕೆ ಕಂಡಿದೆ. ಅವರೀಗ ವಿಶ್ವದ ನಂ. 3 ಶ್ರೀಮಂತನಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಈಗ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಒಟ್ಟು 91.9 ಶತಕೋಟಿ ಡಾಲರ್‌ ಮೌಲ್ಯದೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರರಲ್ಲಿ ಸ್ಥಾನ ಪಡೆದ ಏಷ್ಯಾ ಉದ್ಯಮಿ ಎಂಬ ಹೆಗ್ಗಳಿಕೆಗೂ ಅದಾನಿ ಪಾತ್ರರಾಗಿದ್ದಾರೆ.

137.4 ಬಿಲಿಯನ್ ಡಾಲರ್‌ (10.97 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿರುವ 60 ವರ್ಷದ ಅದಾನಿ ಅವರು, ಲೂಯಿಸ್ ವಿಟಾನ್ ಕಂಪನಿಯ ಅಧ್ಯಕ್ಷ ಅರ್ನಾಲ್ಟ್ ಅವರ ಸಂಪತ್ತನ್ನು ಮೀರಿಸಿರುವ ಅದಾನಿ ಇದೀಗ, ಅಮೆರಿಕದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆಜಾನ್‌‌ನ ಜೆಫ್ ಬೆಜೋಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.

Edited By : Abhishek Kamoji
PublicNext

PublicNext

31/08/2022 01:17 pm

Cinque Terre

25.06 K

Cinque Terre

6

ಸಂಬಂಧಿತ ಸುದ್ದಿ