ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು-ಉಡುಪಿ ರಸ್ತೆಯ ಜಂಗಲ್‌ ಡ್ರೈವ್‌ಗೆ ಆನಂದ್ ಮಹೀಂದ್ರಾ ಫಿದಾ

ಬೆಂಗಳೂರು: ಆನಂದ್ ಮಹೀಂದ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಉದ್ಯಮಿ. ಚಂದದ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಬೆಂಗಳೂರು ಮತ್ತು ಉಡುಪಿ ನಡುವಿನ ರಸ್ತೆಗೆ ಫೋಟೋ ತುಂಬಾ ಸುಂದರವಾಗಿದೆ ಮತ್ತು ಆಕರ್ಷಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆನಂದ್ ಮಹೀಂದ್ರ ರಿಟ್ವೀಟ್ ಫೋಟೋದಲ್ಲಿ, ಎರಡು ಬದಿಗಳಲ್ಲಿ ಹಚ್ಚ ಹಸಿರಿನ ಮರಗಳಿಂದ ಕೂಡಿದ ರಸ್ತೆಯನ್ನು ಕಾಣಬಹುದಾಗಿದೆ. ಮೂಲ ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ಈ ರಸ್ತೆಯು ಬೆಂಗಳೂರಿನಿಂದ ಉಡುಪಿಗೆ ಹೋಗುವಾಗ ಕುಕ್ಕೆ ಸುಬ್ರಹ್ಮಣ್ಯದಿಂದ ಗುಂಡ್ಯಕ್ಕೆ ಹೋಗುತ್ತದೆ.

'ಇದು ಅದ್ಭುತವಾದ ಚಿತ್ರ, ಚಿತ್ರವನ್ನು ನೋಡುತ್ತಿದ್ದರೆ ಈ ಹಸಿರಿನಲ್ಲಿ ಧುಮುಕಿ ಬಿಡೋಣ ಅನಿಸುತ್ತದೆ. ಎಷ್ಟು ಅದ್ಭುತವಾಗಿ ಕಾಣುತ್ತಿದೆ' ಎಂದು ಆನಂದ್ ಮಹೀಂದ್ರಾ ಅವರು ಪೋಸ್ಟ್‌ನ ಶೀರ್ಷಿಕೆಯನ್ನು ಬರೆದಿದ್ದಾರೆ.

ನೆಟಿಜನ್‌ಗಳು ಚಿತ್ರದ ಬಗ್ಗೆ ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಮಾರ್ಗ ಮಳೆಯ ನಂತರ ಸ್ವರ್ಗವಾಗಿ ಬದಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಇಂತಹ ರಸ್ತೆಯಲ್ಲಿ ಬೈಸಿಕಲ್ ಸವಾರಿ ಮಾಡುವುದು ಅದ್ಭುತವಾಗಿರುತ್ತದೆ ಎಂದಿದ್ದಾರೆ.

Edited By : Vijay Kumar
PublicNext

PublicNext

01/06/2022 08:58 pm

Cinque Terre

20.17 K

Cinque Terre

0

ಸಂಬಂಧಿತ ಸುದ್ದಿ