ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ನಾಳೆ ಬಂಕ್ ಮಾಲೀಕರ ಮುಷ್ಕರ-ಪೆಟ್ರೋಲ್ ಸಿಗೋದು ಡೌಟ್ !

ಬೆಂಗಳೂರು: ನಗರದ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ ಮಾಲೀಕರು ನಾಳೆ ಬೆಂಗಳೂರಲ್ಲಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗೋ ಸಾಧ್ಯತೆ ಹೆಚ್ಚಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಮಾಲೀಕರು ತಮ್ಮ ವಿವಿಧ ಬೇಡಿಕೆ ಈಡೇರಿಸಿಕೊಳ್ಳು ಈ ಬಂದ್ ಕರೆ ಕೊಟ್ಟಿದ್ದಾರೆ. ಇದರಿಂದ ಬಂಕ್ ಮಾಲೀಕರು ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನೂ ನಾಳೆ ಬಂದ್ ಮಾಡಲಿದ್ದು,ಬಂಕ್ ನಲ್ಲಿ ಸ್ಟಾಕ್ ಇರೋ ಪೆಟ್ರೋಲ್ ಮತ್ತು ಡೀಸೆಲ್ ಮಾತ್ರ ಮಾರಾಟ ಮಾಡಲಾಗುವುದು ಅಂತಲೂ ಬಂಕ್ ಮಾಲೀಕರು ಹೇಳಿದ್ದಾರೆ.

ಬಂಕ್ ಮಾಲೀಕರ ಬೇಡಿಕೆಗಳು ಇಂತಿವೆ. ಬೇಡಿಕೆಗೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸಬೇಕು. ನಾವು ಖರೀದಿಸಿದ್ದ ತೈಲಕ್ಕೆ ನೀಡಿದ್ದ ತೆರಿಗೆಯನ್ನ ಮರುಪಾವತಿ ಮಾಡಿಲ್ಲ. ಕೇಂದ್ರ ಸರ್ಕಾರ ಎರಡು ಸಲ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಟ್ಯಾಕ್ಸ್ ಕಡಿತಗೊಳಿಸಿದೆ. ಇದರಿಂದ ಪ್ರತಿ ಡೀಲರ್‌ಗೆ 7-8 ಲಕ್ಷ ನಷ್ಟ ಆಗಿದೆ ಅಂತಲೇ ಬಂಕ್ ಮಾಲೀಕರು ಆಗ್ರಹಿಸುತ್ತಿದ್ದಾರೆ.

Edited By :
PublicNext

PublicNext

30/05/2022 12:30 pm

Cinque Terre

26.55 K

Cinque Terre

0

ಸಂಬಂಧಿತ ಸುದ್ದಿ