ನವದಹೆಲಿ: ಕಾಗದಗಳನ್ನ ಆಮದು ಮಾಡಿಕೊಳ್ಳುವವರು ಇನ್ಮುಂದೆ ಅದನ್ನ ನೋಂದಣಿ ಮಾಡಿಸಿಕೊಳ್ಳಲೇಬೇಕು ಎಂದು ಸರ್ಕಾರ ಈಗ ಅಧಿಸೂಚನೆ ಹೊರಡಿಸಿದೆ.
ಅಕ್ಟೋಬರ್-01 ರಿಂದಲೇ ಇದು ಜಾರಿಗೆ ಬರಲಿದ್ದು, ಪ್ರಮುಖ ಕಾಗದ ಉತ್ಪನ್ನಗಳ ಆಮದು ನೀತಿಯನ್ನ ಈಗ ಪೇಪರ್ ಆಮದು ಮಾನಿಟರಿಂಗ್ ಸಿಸ್ಟಮ್ ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿದ್ದುಪಡಿ ಮಾಡಲಾಗಿದೆ.
ಮುಕ್ತ ವ್ಯಾಪಾರ ನಿರ್ದೇಶನಾಲಯ ಈ ಕುರಿತು ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಅಂದ್ಹಾಗೆ ಈ ಆದೇಶವು ನ್ಯೂಸ್ ಪ್ರಿಎಂಟ್,ಕೈಯಿಂದ ಪೇಪರ್,ವಾಲ್ ಪೇಪರ್ ಬೇಸ್,ಡುಪ್ಲಿಕೇಟಿಂಗ್ ಪೇಪರ್,ಕೋಟೆಡ್ ಪೇಪರ್,ಅನ್ ಕೋಡ್ ಪೇಪರ್,ಲಿಥೋ ಮತ್ತು ಆಫ್ ಸೆಟ್ ಪೇಪರ್ ನಂತಹ ಪೇಪರ್ ಉತ್ಪನ್ನಗಳಿಗೆ ಇದು ಅನ್ವಯಿಸುತ್ತದೆ.
PublicNext
27/05/2022 10:19 am