ಬೆಂಗಳೂರು: ರೈತರು ಟೊಮೆಟೋಗೆ ಸರಿಯಾದ ಬೆಲೆ ಸಿಗ್ತಾನೇ ಇಲ್ಲ ಅಂತಲೇ ರಸ್ತೆಗೆ ಹಾಕಿ ಹೋಗಿದ್ದು ಗೊತ್ತೇ ಇದೆ. ಈಗ ಅದೇ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರ್ತಾನೇ ಇದೆ. ಆ ಏರಿಕೆ ಈಗ ಶತಕ ಬಾರಿಸಿದೆ. ಅದಕ್ಕೋ ಏನೋ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮೀಮ್ಸ್ ಭಾರಿ ಟ್ರೆಂಡ್ ಆಗುತ್ತಿವೆ.
ಟೊಮೆಟೋ ಪ್ರತಿ ಮನೆಯ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಇದು ಒಂದು ರೀತಿ ಎಲ್ಲದಕ್ಕೂ ಬೇಕೆ ಬೇಕು. ಇಂತಹ ಟೊಮೆಟೋ ದರ ಒಂದು ಕೆಜಿಗೆ 10 ಇಲ್ಲವೆ 20 ರೂಪಾಯಿಗೆ ದೊರೆಯುತ್ತಿತ್ತು. ಆದರೆ, ಇದೇ ಟೊಮೆಟೋ ದರ ಈಗ 70 ರಿಂದ 100 ರೂಪಾಯಿ ಪ್ರತಿ ಕೆಜಿಗೆ ಆಗಿದೆ.
ಈರುಳ್ಳಿ ಬೆಲೆ ಗಗನಕ್ಕೆ ಏರಿದಾಗ ಮೀಮ್ಸ್ ಸಾಕಷ್ಟು ಕ್ರಿಯೆಟ್ ಆಗಿದ್ದವು. ಆ ಜಾಗವನ್ನ ಈಗ ಟೊಮೆಟೋ ತುಂಬಿದೆ. ಟೊಮೆಟೋ ಬೆಲೆ ಏರಿಕೆ ಮೇಲೆನೆ ಭಾರಿ ಭಾರಿ ಮೇಮ್ಸ್ ಕ್ರಿಯೇಟ್ ಆಗಿ ಗಮನ ಸೆಳೆಯುತ್ತಿವೆ.
PublicNext
20/05/2022 10:45 am