ಮುಂಬಯಿ: ಕ್ಯಾಂಪ್ ಬೆಲ್ ವಿಲ್ಸನ್ ಅವರು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾದ ಬೋರ್ಡ್ ಕ್ಯಾಂಪ್ ಬೆಲ್ ವಿಲ್ಸನ್ ಅವರ ನೇಮಕಾತಿಯ ಬಗ್ಗೆ ಘೋಷಣೆ ಮಾಡಿದೆ.
ವಾಯುಯಾನ ಉದ್ಯಮದಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ವಿಲ್ಸನ್ (50) ಸಿಂಗಾಪುರ್ ಏರಲೈನ್ಸ್ ಒಡೆತನದ ಅಂಗಸಂಸ್ಥೆಯಾದ ಸ್ಕೂಟ್ ನ ಸಿಇಒ ಆಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಟರ್ಕಿಶ್ ಏರ್ ಲೈನ್ಸ್ ನ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಸಿಇಒ ಹಾಗೂ ಎಂಡಿಯಾಗಿ ಟಾಟಾ ಸನ್ಸ್ ಘೋಷಣೆ ಮಾಡಿತ್ತು, ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯಗಳು ವಿವಾದಾತ್ಮಕವಾಗಿದ್ದ ಹಿನ್ನೆಲೆಯಲ್ಲಿ ಅವರು ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ್ದರು.
PublicNext
13/05/2022 08:22 am