ನವದೆಹಲಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿದೆ. ಪೆಟ್ರೋಲ್-ಡೀಸೆಲ್ ಮೊದಲೇ ಏರಿಕೆ ಆಗಿವೆ.ಆದರೆ, ಈಗ ಗೋಧಿ ಹಿಟ್ಟಿನ ದರವೂ ಮುಗಿಲು ಮುಟ್ಟುತ್ತಿದೆ.
ಗೋಧಿ ಹಿಟ್ಟಿನ ರೇಟ್ ಹೆಚ್ಚಾಗಿರೋದ್ರಿಂದ ಬೇಕರಿ ಐಟಂ ದರವೂ ಹೆಚ್ಚುತ್ತದೆ. ಚಪಾತಿ ಸೇವಿಸಬೇಕು ಅನ್ನೋರು ಯೋಚನೆ ಮಾಡಿಯೇ ತಿನ್ನಬೇಕೋ ಏನೋ.
ಭಾರತದಲ್ಲಿ ಗೋದಿ ಹಿಟ್ಟಿನ ಸರಾಸರಿ ಮಾಸಿಕ ದರ ಕೆಜಿಗೆ 32.38 ರೂಪಾಯಿಗೆ ತಲುಪಿದೆ. 2010 ರ ಬಳಿಕ ಇದು ದಾಖಲೆಯ ಏರಿಕೇನೆ ಆಗಿದೆ. ಕಳೆದ ಶನಿವಾರ ಗೋಧಿ ಹಿಟ್ಟಿನ ಸರಾಸರಿ ರಿಟೇಲ್ ರೇಟ್ ಕೆಜಿಗೆ 32.78 ರೂಪಾಯಿ ಇತ್ತು.
ಆದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಗೋಧಿ ಹಿಟ್ಟಿನ ಬೆಲೆ ಶೇಕಡ 9.15 ರಷ್ಟು ಹೆಚ್ಚಳವಾಗಿದೆ.
PublicNext
10/05/2022 07:05 pm