ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಾಜಿಗಿದೆ ಅತಿದೊಡ್ಡ ಬಿಳಿ ವಜ್ರ, 'ದಿ ರಾಕ್'

ಜಿನೇವಾ: ಮುಂದಿನ ವಾರ ಜಿನೀವಾದಲ್ಲಿ ವಿಶ್ವದ ಅತಿ ದೊಡ್ಡ ದಿ ರಾಕ್ ಹೆಸರಿನ ಬಿಳಿ ವಜ್ರವನ್ನು ಹರಾಜಿಗಿಡಲು ಸಿದ್ಧತೆ ನಡೆಸಲಾಗಿದೆ. 'ದಿ ರಾಕ್', 228.31 ಕ್ಯಾರೆಟ್ ನ ಈ ವಜ್ರ ಬರೋಬ್ಬರಿ 30ಮಿಲಿಯನ್ ಡಾಲರ್ ಗೆ ಹರಾಜಿಗಿಡಲಾಗಿದೆ ಎಂದು ಹರಾಜುದಾರರು ತಿಳಿಸಿದ್ದಾರೆ.

200 ಕ್ಯಾರೆಟ್ ಗೂ ಅಧಿಕ ತೂಕವಿರುವ ಎರಡು ವಜ್ರದ ದೊಡ್ಡ ಹರಳುಗಳು ಇದರಲ್ಲಿದೆ. ಗಾಲ್ಫ್ ಬಾಲ್ ಗಾತ್ರವಿರುವ ಈ ಬಿಳಿ ವಜ್ರವನ್ನು ಜಿನೇವಾದ ಕ್ರಿಸ್ಟಿ ಆಭರಣ ಸಂಸ್ಥೆ ಹರಾಜಿಗಿಡಲು ಸದ್ಯ ಬೆಲೆಯನ್ನು ನಿಗದಿಪಡಿಸಿದೆ.

ಇದು ಸಂಪೂರ್ಣವಾಗಿ ಪಿಯರ್ ಆಕಾರದಲ್ಲಿದ್ದು, ಹರಾಜಿನಲ್ಲಿ ಮಾರಾಟವಾಗುವ ಅಪರೂಪದ ರತ್ನಗಳಲ್ಲಿ ಒಂದಾಗಿದೆ.ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಮಾಡಲಾದ ದಿ ರಾಕ್ ವಜ್ರವು ಹಿಂದಿನ ಮಾಲೀಕರು ನೆಕ್ಲೇಸ್ ರೂಪದಲ್ಲಿ ಧರಿಸುತ್ತಿದ್ದರು.

Edited By : Nirmala Aralikatti
PublicNext

PublicNext

06/05/2022 09:04 pm

Cinque Terre

26.06 K

Cinque Terre

0

ಸಂಬಂಧಿತ ಸುದ್ದಿ