ನವದೆಹಲಿ: 2022ರ ಮೊದಲ ತ್ರೈಮಾಸಿಕದಲ್ಲಿ ಪೆಟ್ರೊಲಿಯಂ ಕಂಪನಿ ಶೆಲ್ 9.1 ಬಿಲಿಯನ್ ಡಾಲರ್ ಗಳಿಕೆ ತೋರಿಸಿದೆ. ಹಿಂದಿನ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಇದು ಮೂರುಪಟ್ಟು ಹೆಚ್ಚು ಆದಾಯವಾಗಿದೆ.
ತೈಲ ಬೆಲೆ ಏರಿಕೆಗೆ ಉಕ್ರೇನ್ ಸಂಘರ್ಷವೂ ಒಂದು ಕಾರಣ ಎನ್ನಲಾಗಿದೆ. ಸದ್ಯ ಜಾಗತಿಕವಾಗಿ ತೈಲ ಬೆಲೆಗಳು ಏರಿಕೆಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಬೆಲೆ ಏರಿಕೆಯ ಲಾಭ ಪಡೆದು ಉತ್ತಮ ವಹಿವಾಟು ನಡೆಸುತ್ತಿವೆ ಎಂಬುದೂ ಅಷ್ಟೇ ಸತ್ಯ. ಇದಕ್ಕೆ ಶೆಲ್ ಕಂಪನಿಯ ವಹಿವಾಟೇ ಉತ್ತಮ ಉದಾಹರಣೆ ಎನ್ನಬಹುದು. ಪೆಟ್ರೊಲಿಯಂ ದೈತ್ಯರಾದ ಬ್ರಿಟನ್ ಮೂಲದ ಶೆಲ್ ಮತ್ತು ಬಿಪಿ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಅಲ್ಲಿನ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದೇ ವೇಳೆ, ತಾನು ಲಾಭ ಮಾಡಿಕೊಳ್ಳುತ್ತಿರುವಂತೆ ಹೊರಜಗತ್ತಿಗೆ ಕಂಡರೂ, ರಷ್ಯದಿಂದ ಕಾಲ್ತೆಗೆಯಬೇಕಾಗಿ ಬಂದಿದ್ದರ ವೆಚ್ಚವೇ ತನಗೆ 4 ಬಿಲಿಯನ್ ಡಾಲರುಗಳಷ್ಟಾಗಿದೆ ಎಂದು ಶೆಲ್ ಕಂಪನಿ ಪ್ರತಿಪಾದಿಸುತ್ತಿದೆ.
PublicNext
06/05/2022 11:43 am