ನ್ಯೂಯಾರ್ಕ್: ಅಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈಗೊಂದು ಹೇಳಿಕೆ ಕೊಟ್ಟಿದ್ದಾರೆ. ಸುದ್ದಿಯಲ್ಲಿಯೇ ಇಲ್ಲದ ಟ್ರಂಪಲ್ ಈಗ ಕೊಟ್ಟಿರೋ ಆ ಹೇಳಿಕೆ ನಿಜಕ್ಕೂ ಮಜವಾಗಿಯೇ ಇದೆ. ಬನ್ನಿ, ಹೇಳ್ತಿವಿ.
ಟ್ವಿಟರ್ ಅನ್ನ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ್ದೇ ತಡ, ಅಮೆರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೀಗಂದು ಬಿಟ್ಟಿದ್ದಾರೆ. ಹೌದು.. ನಾನು ಟ್ವಿಟರ್ ಗೆ ಮರಳುವುದೇ ಇಲ್ಲ. ಇಲ್ಲಿಗೆ ನಾನು ಬರೋದೇ ಇಲ್ಲ.
ನಿಜ, ಈ ಹಿಂದೇನೆ ಟ್ರಂಪ್ ಟ್ವಿಟರ್ ಖಾತಿಯನ್ನ ಬ್ಯಾನ್ ಮಾಡಲಾಗಿದೆ. ಅದಕ್ಕೇನೆ ಟ್ರಂಪಲ್ ತಮ್ಮದೇ ಒಂದು ವೇದಿಕೆ ಮಾಡಿದ್ದರು.ಅದಕ್ಕೆ 'ಟ್ರೂತ್ ಸೋಶಿಯಲ್ ' ಅಂತಲೂ ಹೆಸರಿಟ್ಟಿದ್ದಾರೆ. ಈ ಕಾರಣಕ್ಕೆ ನಾನು ಟ್ವಿಟರ್‌ಗೆ ಬರೋಲ್ಲ ಅಂತಲೇ ಟ್ರಂಪಲ್ ಹೇಳಿಕೆ ಕೊಟ್ಟಿದ್ದಾರೆ.
ಇನ್ನೂ ಎಲಾನ್ ಮಸ್ಕ್ ಬಗ್ಗೆ ಟ್ರಂಪ್ ಕೆಟ್ಟದಾಗಿ ಎಲ್ಲೂ ಏನೂ ಹೇಳಿಯೇ ಇಲ್ಲ ಬಿಡಿ. ಬದಲಾಗಿ, ಎಲಾನ್ ಮಸ್ಕ್ ಮುಂದಿನ ದಿನಗಳಲ್ಲಿ ಟ್ವಿಟರ್ ಅನ್ನ ಇನ್ನಷ್ಟು ಸುಧಾರಿಸಲಿದ್ದಾರೆ. ಅವರಿಗೆ ಗುಡ್ ಲಕ್ ಅಂತಲೇ ಟ್ರಂಪಲ್ ಹೇಳಿದ್ದಾರೆ.
PublicNext
26/04/2022 03:36 pm