ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಶುಕ್ರವಾರ ಬದಲಾವಣೆ ಕಂಡು ಬಂದಿದೆ. ಬಂಗಾರ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಆದರೆ, ಇತ್ತ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ.
ಇವತ್ತು ಪ್ರತಿ 10 ಗ್ರಾಂ ಬಂಗಾರದ ದರದಲ್ಲಿ 67 ರೂ. ಅಥವಾ ಶೇ.0.13ರಷ್ಟು ಏರಿಕೆಯಾಗಿದ್ದು, ದೇಶದ ಮಾರುಕಟ್ಟೆಯಲ್ಲಿ 52,529 ರೂ.ಗೆ ತಲುಪಿದೆ. ಅದೇ ರೀತಿಯಾಗಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 85 ರೂ. ಅಥವಾ ಶೇ.0.13ರಷ್ಟು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 67,069 ರೂ. ನಿಗದಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಒಂದು ಗ್ರಾಂಗೆ 5,286 ರೂ. (24 ಕ್ಯಾರೆಟ್), 4,930 ರೂ. (22 ಕ್ಯಾರೆಟ್) ಹಾಗೂ ಬೆಳ್ಳಿ ಬೆಲೆ 67.80 ರೂ. ಇದೆ. ದಾವಣಗೆರೆಯಲ್ಲಿ ಚಿನ್ನದ ದರ 4,926 ರೂ. (22 ಕ್ಯಾರೆಟ್), 5,370 ರೂ. (24 ಕ್ಯಾರೆಟ್), ಬೆಳ್ಳಿ ದರ 72.18 ರೂ. ಇದೆ. ಬೆಳಗಾವಿಯಲ್ಲಿ ಚಿನ್ನದ ಬೆಲೆ 5,000 ರೂ. (22 ಕ್ಯಾರೆಟ್), 5,350 ರೂ. (24 ಕ್ಯಾರೆಟ್), ಬೆಳ್ಳಿ 71.7 ರೂ. ಇದೆ.
PublicNext
22/04/2022 06:44 pm