ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಕಾರ್‌ನಲ್ಲಿ 6 ಏರ್ ಬ್ಯಾಗ್;ಹೊಸ ನಿಯಮ ಶೀಘ್ರವೇ ಜಾರಿ !

ನವದೆಹಲಿ: ಕಾರುಗಳಲ್ಲಿ 6 ಏರ್ ಬ್ಯಾಗ್ ಇರಲೇಬೇಕು ಅಂತಲೇ ರಸ್ತೆ ಸಾರಿಗೆ ಸಚಿವಾಲಯ ನಿರ್ಧರಿಸಿದೆ. ಈ ನಿಟ್ಟಿನಲ್ಲಿಯೇ ಮುಂದೆ ಹೆಜ್ಜೆ ಇರಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುರಕ್ಷತೆ ಅಂತ ಬಂದ್ರೆ ರಾಜಿ ಮಾಡಿಕೊಳ್ಳುವ ಚಾನ್ಸೇ ಇಲ್ಲ. ಸಚಿವಾಲಯ ಈ ಸಂಬಂಧ ಈಗಾಗಲೇ ನಿಯಮ ಫೈನಲ್ ಮಾಡುತ್ತಿದೆ. ಅಧಿಸೂಚನೆ ಹೊರಡಿಸಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಆ ಅಧಿಕಾರಿ ವಿವರಿಸಿದ್ದಾರೆ.

ಆದರೆ, ಈ ಒಂದು ಹೊಸ ನಿಯಮವನ್ನ ಕೆಲವು ಕಾರ್ ತಯಾರಕ ಕಂಪನಿಗಳು ವಿರೋಧಿಸುತ್ತಿದ್ದು, 6 ಏರ್ ಬ್ಯಾಗ್ ಅಳವಡಿಕೆ ಮಾಡೋದ್ರಿಂದ ಕಾರಿನ ವೆಚ್ಚ ಹೆಚ್ಚಾಗುತ್ತದೆ ಎಂದು ಹೇಳ್ತಿವೆ.

Edited By :
PublicNext

PublicNext

22/04/2022 02:52 pm

Cinque Terre

84.04 K

Cinque Terre

3

ಸಂಬಂಧಿತ ಸುದ್ದಿ