ನವದೆಹಲಿ:ರಷ್ಯಾ ದೇಶದ ಟೈಮ್ ನಿಜಕ್ಕೂ ಚೆನ್ನಾಗಿಲ್ಲ ಬಿಡಿ. ಎಲ್ಲ ದೇಶಗಳು ರಷ್ಯಾ ವಿರುದ್ಧ ಒಂದು ರೀತಿ ತಿರುಗಿ ಬಿದ್ದಿವೆ. ಅದರಂತೆ ಈಗ ಟಾಟಾ ಸ್ಟೀಲ್ ಕೂಡ ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿಯೇ ಈ ಒಂದು ನಿರ್ಧಾರ ತೆಗೆದುಕೊಂಡಿದೆ. ಆದರೆ, ಈಗ ಟಾಟಾ ಸ್ಟೀಲ್ ಕಂಪನಿ ಅದನ್ನ ಹೇಳಿಕೊಂಡಿದೆ.
ಪ್ರಜ್ಞಾಪೂರ್ವಕವಾಗಿ ಈ ಒಂದು ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಅಂತಲೂ ಕಂಪನಿಯ ವಕ್ತಾರ ಹೇಳಿಕೊಂಡಿದ್ದಾರೆ.ಟಾಟಾ ಸ್ಟೀಲ್ ಕಂಪನಿಯು ಕಚ್ಚಾ ವಸ್ತುಗಳಿಗಾಗಿಯೇ ರಷ್ಯಾ ದೇಶವನ್ನ ಅವಲಂಬಿಸಿತ್ತು. ಅದನ್ನ ತಗ್ಗಿಸಲು ಭಾರತ,ಬ್ರಿಟನ್ ಹಾಗೂ ನೆದರ್ಲೆಂಡ್ಸ್ ಅವಲಂಬಿಸಲಾಗಿದೆ ಎಂದು ಕೂಡ ಕಂಪನಿ ಹೇಳಿದೆ.
PublicNext
21/04/2022 10:49 am